alex Certify ಅತಿಯಾದ ಚಾಕೋಲೇಟ್ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾದ ಚಾಕೋಲೇಟ್ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ

ಮಕ್ಕಳಿಗೆ ಹಾಗೂ ದೊಡ್ಡವರಿಗೂ ಕೂಡ ಚಾಕೋಲೇಟ್ ಎಂದರೆ ತುಂಬಾ ಇಷ್ಟ. ಇದನ್ನು ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಆದರೆ ಅತಿಯಾಗಿ ಚಾಕೋಲೇಟ್ ಸೇವಿಸಿದರೆ ದೇಹದ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತವೆ.

-ಹಾಲಿನ ಚಾಕೋಲೇಟ್ ನಲ್ಲಿರುವ ಕೊಬ್ಬು ಮತ್ತು ಕ್ಯಾಲೋರಿಗಳು ದೇಹದ ತೂಕವನ್ನು ಹೆಚ್ಚಿಸುತ್ತದೆ.

-ರಾತ್ರಿ ಮಲಗುವಾಗ ಚಾಕೋಲೇಟ್ ಸೇವಿಸಿದರೆ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ಅದರಲ್ಲಿರುವ ಕೆಫೀನ್ ಅಂಶ ತಲೆನೋವು, ವಾಕರಿಕೆಗೆ ಕಾರಣವಾಗುತ್ತದೆ.

-ಚಾಕೋಲೇಟ್ ಅತಿಯಾಗಿ ತಿಂದರೆ ಅದರಲ್ಲಿರುವ ಕೆಫೀನ್ ಅತಿಸಾರ ಹಾಗೂ ಕರುಳಿನ ಸಮಸ್ಯೆಗೆ ಕಾರಣವಾಗಬಹುದು.

-ಚಾಕೋಲೇಟ್ ನಲ್ಲಿರುವ ಕೆಫೀನ್ ದೇಹದ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಬಿಪಿ ಇರುವವರು ಇದರಿಂದ ದೂರವಿರಿ.

-ಚಾಕೋಲೇಟ್ ನಲ್ಲಿರುವ ಕೋಕೋ ಮೂತ್ರದ ಮೂಲಕ ಕ್ಯಾಲ್ಸಿಯಂನ್ನು ಹೊರ ಹಾಕುತ್ತದೆ. ಇದರಿಂದ ದೇಹದಲ್ಲಿ ಮೂಳೆಯ ಸಮಸ್ಯೆ ಕಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...