ಬೆಳಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ನಮಗೆಲ್ಲಾ ಗೊತ್ತಿದೆ. ಈ ರೀತಿ ಮಾಡುವುದರಿಂದ ತೂಕ ಸಹ ಇಳಿಕೆಯಾಗುತ್ತದೆ ಅನ್ನೋದನ್ನು ನೀವು ಸಹ ಕೇಳಿರಬೇಕು. ನಿಂಬೆ ರಸ ಜೀರ್ಣಕ್ರಿಯೆಗೆ ತುಂಬಾ ಸಹಾಯಕವಾಗಿದೆ. ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ಅತಿಯಾಗಿ ಬಳಸಿದ್ರೆ ನಿಂಬೆ ರಸ ಕೂಡ ಆರೋಗ್ಯಕ್ಕೆ ಹಾನಿಕಾರಕ.
ಆರೋಗ್ಯ ತಜ್ಞರ ಪ್ರಕಾರ ನಿಂಬೆ ಪಾನಕ ಅಥವಾ ನಿಂಬೆ ರಸವನ್ನು ಅತಿಯಾಗಿ ಸೇವನೆ ಮಾಡುವುದರಿಂದ ಅನೇಕ ಅಂಗಗಳಿಗೆ ಹಾನಿಯಾಗಬಹುದು. ನಿಂಬೆ ವಿಟಮಿನ್ ಸಿಯ ಸಮೃದ್ಧ ಮೂಲವಾಗಿದೆ. ಈ ಪೋಷಕಾಂಶದ ಮಟ್ಟವು ನಮ್ಮ ದೇಹದಲ್ಲಿ ಹೆಚ್ಚಾದರೆ ಅದು ಅನೇಕ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಅನೇಕ ವೈದ್ಯರು ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವಂತೆ ಶಿಫಾರಸು ಮಾಡುತ್ತಾರೆ.
ಹೊಟ್ಟೆ ನೋವು: ವಿಟಮಿನ್ ಸಿಯನ್ನು ಅತಿಯಾಗಿ ಸೇವನೆ ಮಾಡಿದ್ರೆ ಹೊಟ್ಟೆಯ ಆಮ್ಲೀಯ ಸ್ರವಿಸುವಿಕೆ ಹೆಚ್ಚಾಗುವ ಸಾಧ್ಯತೆ ಇದೆ. ನಿಂಬೆ ರಸ ಬೆರೆಸಿದ ನೀರನ್ನು ಅತಿಯಾಗಿ ಕುಡಿಯುವುದರಿಂದ ವಾಂತಿ, ಭೇದಿ, ವಾಕರಿಕೆ ಮುಂತಾದ ಸಮಸ್ಯೆಗಳು ಬರುತ್ತವೆ. ಅನೇಕ ಜನರು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್‌ನಿಂದ ಬಳಲುತ್ತಿದ್ದು, ಅಂಥವರು ಕಡಿಮೆ ಪ್ರಮಾಣದಲ್ಲಿ ನಿಂಬೆ ರಸವನ್ನು ಸೇವಿಸಬೇಕು.
ಬಾಯಿ ಹುಣ್ಣು: ನಿಂಬೆ ರಸ ಬಾಯಿಯ ದುರ್ವಾಸನೆ ತಡೆಯುತ್ತದೆ. ಇದರಿಂದ ಹಲ್ಲುಗಳನ್ನು ಶುಚಿಗೊಳಿಸಲಾಗುತ್ತದೆ. ಆದರೆ ನಿಂಬೆಯನ್ನು ಅತಿಯಾಗಿ ಬಳಕೆ ಮಾಡಿದರೆ ಅದರಲ್ಲಿರುವ ಸಿಟ್ರಿಕ್ ಆಮ್ಲವು ಬಾಯಿಯ ಅಂಗಾಂಶಗಳಲ್ಲಿ ಊತವನ್ನು ಉಂಟುಮಾಡುತ್ತದೆ. ಇದರಿಂದಾಗಿ ಬಾಯಿಯಲ್ಲಿ ಗುಳ್ಳೆಗಳು ಮತ್ತು ಉರಿ ಉಂಟಾಗುತ್ತದೆ.
ಹಲ್ಲುಗಳು ದುರ್ಬಲ: ನಿಂಬೆ ರಸ ಬಳಸುವಾಗ ಅಥವಾ ನಿಂಬೆ ಪಾನಕ ಕುಡಿಯುವಾಗ ಅದಕ್ಕೆ ಲೆಮನ್ ಗ್ರಾಸ್ ಅಥವಾ ಮಜ್ಜಿಗೆ ಹುಲ್ಲನ್ನು ಬೆರೆಸಿ. ಇದು ಹಲ್ಲುಗಳೊಂದಿಗೆ ನಿಂಬೆ ರಸದ ಸಂಪರ್ಕವನ್ನು ಕಡಿಮೆ ಮಾಡುತ್ತದೆ. ಹೀಗೆ ಮಾಡುವುದರಿಂದ ಹಲ್ಲುಗಳು ದುರ್ಬಲವಾಗುವುದಿಲ್ಲ.