ಒಂದೊಪ್ಪತ್ತು ಊಟ ಇಲ್ಲದೇ ಇರಬಹುದು, ಮೊಬೈಲ್ ಇಲ್ಲದೇ ಬದುಕಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಬಹುತೇಕ ಜನರು ಇಯರ್ ಫೋನ್ ಅನ್ನು ಹೆಚ್ಹೆಚ್ಚು ಬಳಸ್ತಾರೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಯಾವುದೇ ವಸ್ತುವಿನ ಅತಿಯಾದ ಬಳಕೆ ದೇಹಕ್ಕೆ ಹಾನಿಕಾರಕ. ಅದೇ ರೀತಿ ಇಯರ್‌ಫೋನ್ ಮತ್ತು ಹೆಡ್‌ಫೋನ್‌ಗಳ ಬಳಕೆ ಕೂಡ ಕಿವಿಗೆ ಸಾಕಷ್ಟು ಹಾನಿ ಮಾಡುತ್ತದೆ. ದಿನವಿಡೀ ಇಯರ್ ಫೋನ್ ಬಳಸಿದ್ರೆ ಕಿವಿಯಲ್ಲಿ ಇನ್‌ಫೆಕ್ಷನ್ ಆಗಬಹುದು. ಶ್ರವಣ ಶಕ್ತಿ ದುರ್ಬಲವಾಗುವ ಅಪಾಯವೂ ಇರುತ್ತದೆ.
ಇಯರ್ ಫೋನ್ ಬಳಕೆಯಿಂದ ಪದೇ ಪದೇ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಆರಂಭದಲ್ಲಿ ಕಿವಿಯಲ್ಲಿ ನೋವು ಪ್ರಾರಂಭವಾಗುತ್ತದೆ. ಕ್ರಮೇಣ ಈ ಸಮಸ್ಯೆ ಹೆಚ್ಚಾಗಬಹುದು. ಅಷ್ಟೇ ಅಲ್ಲ ಕೆಲವರಿಗೆ ತಲೆತಿರುಗುವಿಕೆ ಕೂಡ ಶುರುವಾಗುತ್ತದೆ.
ಕೆಲವೊಂದು ಹೆಡ್‌ಫೋನ್‌ಗಳು ಭಾರವಾಗಿರುತ್ತವೆ. ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಹೆಡ್‌ಫೋನ್‌ಗಳ ಅತಿಯಾದ ಬಳಕೆ ಏಕಾಗ್ರತೆಗೆ ತೊಂದರೆ ಉಂಟುಮಾಡಬಹುದು. ಇತರರು ಬಳಸಿದ ಇಯರ್ ಫೋನ್ ಅಥವಾ ಹೆಡ್ ಫೋನ್‌ಗಳನ್ನು ಬಳಸಿದ್ರೆ ಇನ್ಫೆಕ್ಷನ್ ಆಗುವ ಅಪಾಯ ಹೆಚ್ಚಾಗಿರುತ್ತದೆ. ಇಯರ್ ಫೋನ್‌ಗಿಂತ ಹೆಡ್ ಫೋನ್ ಬಳಸುವುದು ಸ್ವಲ್ಪ ಮಟ್ಟಿಗೆ ಸುರಕ್ಷಿತ.