ಅತಿಥಿಗಳು ಯಾವಾಗ ಬರ್ತಾರೆ ಎಂಬುದಕ್ಕೆ ದಿನ, ತಿಥಿಯಿಲ್ಲ. ಹಾಗಾಗಿಯೇ ಅವ್ರಿಗೆ ಅತಿಥಿ ಎನ್ನುತ್ತಾರೆ. ಭಾರತೀಯ ಮನು ಸೃತಿಯಲ್ಲಿ ಅತಿಥಿಯನ್ನು ದೇವರೆಂದು ಹೇಳಲಾಗುತ್ತದೆ. ವ್ಯಕ್ತಿಯ ಮನೆಯಲ್ಲಿ 4 ವಿಷಯಗಳಿದ್ದರೆ ಆ ಮನೆಯಲ್ಲಿ ಅತಿಥಿಯಾಗಿ ಹೆಚ್ಚು ಹೊತ್ತು ಇರಬಾರದು.
ನೀವು ಹೋದ ಮನೆಯಲ್ಲಿ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲವಾದ್ರೆ ಆ ಮನೆಯಲ್ಲಿ ಮೂಲ ಸೌಕರ್ಯವಿಲ್ಲವೆಂದರ್ಥ. ಹಾಗಾಗಿ ಅವ್ರ ಮನೆಯಲ್ಲಿ ತುಂಬಾ ಹೊತ್ತು ಕುಳಿತುಕೊಳ್ಳುವುದು ಸೂಕ್ತವಲ್ಲ.
ಅತಿಥಿಗಳಿಗೆ ಸೂಕ್ತ ಆಹಾರ ನೀಡಲು ಸಾಧ್ಯವಾಗದ ಮನೆಗೆ ಅತಿಥಿಯಾಗಿ ಹೋಗಬಾರದು. ಹೋದ್ರೂ ಅಲ್ಲಿ ತುಂಬಾ ಸಮಯ ಇರಬಾರದು.
ಅತಿಥಿಗಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದ ಮನೆಗೂ ನೀವು ಹೋಗಬೇಡಿ. ಮಲಗಲು ಸರಿಯಾದ ವ್ಯವಸ್ಥೆಯಿಲ್ಲದ ಮನೆಗೆ ಹೋದ್ರೆ ರಾತ್ರಿಯವರೆಗೆ ಇರಬೇಡಿ.
ನೀರಿನ ಕೊರತೆಯಿರುವ ಮನೆಗೆ ಹೋಗುವುದೂ ಸೂಕ್ತವಲ್ಲ. ಅತಿಥಿ ಬಾಯಾರಿಸಲು ಸಾಧ್ಯವಾಗದಷ್ಟೂ ನೀರಿಲ್ಲವೆಂದಾದ್ರೆ ಅತಿಥಿ ಸತ್ಕಾರಕ್ಕೆ ಅವ್ರು ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಆ ಮನೆಗೆ ಹೋಗದಿರುವುದೇ ಲೇಸು.