ಅಂತರ್ಜಾಲದಲ್ಲಿ ನಿಮ್ಮ ಹೃದಯವನ್ನು ಕರಗಿಸುವ ಸಾಕಷ್ಟು ವಿಡಿಯೋಗಳು, ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಮಗುವಿನ ವಿಡಿಯೋ ಅಂದ್ರೆ ಬಹುತೇಕರು ಇಷ್ಟ ಪಡುತ್ತಾರೆ. ಅಂತಹ ಒಂದು ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಇದು ಬಾಲಕನೊಬ್ಬ ತನ್ನ ನವಜಾತ ಶಿಶು ಸಹೋದರಿಯನ್ನು ಮೊದಲ ಬಾರಿಗೆ ನೋಡಿದಾಗ ಅವನು ಯಾವ ರೀತಿಯಾಗಿ ಪ್ರತಿಕ್ರಿಯಿಸಿದ ಎಂಬುದಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವು, ತನ್ನ ಸಹೋದರಿಯನ್ನು ಮೊದಲ ಬಾರಿಗೆ ಭೇಟಿಯಾದ ಪ್ರೀತಿಯ ಕ್ಷಣವನ್ನು ಸೆರೆಹಿಡಿಯಲಾಗಿದೆ. ಆ ಬಾಲಕ ನೀಡಿರೋ ಪ್ರತಿಕ್ರಿಯೆಯು ಅಮೂಲ್ಯವಾಗಿದೆ. ವಿಡಿಯೋ ನೋಡುತ್ತಿದ್ರೆ ನಮಗರಿವಿಲ್ಲದೆ ಆನಂದಭಾಷ್ಪ ಸುರಿಯುತ್ತದೆ.
ವಿಡಿಯೋದಲ್ಲಿ, ಬಾಲಕ ತನ್ನ ಸಹೋದರಿ ನವಜಾತ ಶಿಶುವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿರುವ ಕೋಣೆಗೆ ಹೋಗಿದ್ದಾನೆ. ತಾನು ತನ್ನ ತಂಗಿಯನ್ನು ನೋಡುತ್ತಿದ್ದೇನೆ ಎಂದು ಹೇಳುತ್ತಾ ಒಳನಡೆದಿದ್ದಾನೆ. ಬಾಲಕ ತನ್ನ ತಂಗಿಯ ಹತ್ತಿರ ಬರುತ್ತಿದ್ದಂತೆ, ಶಿಶುವಿನ ತಲೆಯನ್ನು ತಟ್ಟಿ, ತುಂಬಾ ಮುದ್ದಾಗಿದೆ ಮಗು. ತಾನು ತಂಗಿಯನ್ನು ಪ್ರೀತಿಸುವುದಾಗಿ ಹೇಳಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿಜವಾದ ಪ್ರೀತಿ ಅಂದ್ರೆ ಇದೆ ಅಲ್ವಾ ಅಂತಾ ನೆಟ್ಟಿಗರು ಕೊಂಡಾಡಿದ್ದಾರೆ.