ಅಡುಗೆ ಸೋಡಾವನ್ನು ಬಹುತೇಕ ಎಲ್ಲರೂ ಬಳಸ್ತಾರೆ. ಬೇಕರಿ ತಿಂಡಿಗಳಾದ ಕೇಕ್, ಬ್ರೆಡ್‌ಗಳಿಗೆಲ್ಲ ಅಡುಗೆ ಸೋಡಾ ಬೇಕೇ ಬೇಕು. ಕೆಲವರು ಸೋಡಾ ಬೆರೆಸಿದ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಅಡುಗೆ ಸೋಡಾವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅದು ಕೆಟ್ಟದ್ದಲ್ಲ. ಆದರೆ ಅದನ್ನು ಅತಿಯಾಗಿ ತಿನ್ನುವುದು ಹಾನಿಕಾರಕ.
ಹೊಟ್ಟೆಯಲ್ಲಿ ಗ್ಯಾಸ್: ಅಡುಗೆ ಸೋಡಾವನ್ನು ಅತಿಯಾಗಿ ಸೇವನೆ ಮಾಡಿದ್ರೆ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಬಹುದು. ಇದು ವಾಯು ಅಥವಾ ಹೊಟ್ಟೆ ಉಬ್ಬರಿಸುವಿಕೆಗೆ ಕಾರಣವಾಗುತ್ತದೆ. ಸೋಡಾ ಸೇವಿಸಿದಾಗ, ಅದು ರಾಸಾಯನಿಕ ಪ್ರಕ್ರಿಯೆಯ ಅಡಿಯಲ್ಲಿ ಆಮ್ಲದೊಂದಿಗೆ ಬೆರೆಯುತ್ತದೆ.
ಹೃದಯಾಘಾತ: ಅಡುಗೆ ಸೋಡಾದಲ್ಲಿ ಸೋಡಿಯಂ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ನಮ್ಮ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೇಕಿಂಗ್ ಸೋಡಾವನ್ನು ಮಿತಿಮೀರಿ ಸೇವನೆ ಮಾಡಿದರೆ ಹೃದಯಾಘಾತ ಅಥವಾ ಹೃದಯ ವೈಫಲ್ಯ ಉಂಟಾಗಬಹುದು. ಹೆಚ್ಚು ಅಡಿಗೆ ಸೋಡಾ ಸೇವನೆ ಮಾಡುವವರಲ್ಲಿ ಹೃದಯ ಸ್ತಂಭನದ ಅಪಾಯ ಹೆಚ್ಚು.
ಅಡುಗೆ ಸೋಡಾವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?
ನಿಮಗೆ ಜೀರ್ಣಕ್ರಿಯೆಯ ಸಮಸ್ಯೆ ಇದ್ದರೆ ಅರ್ಧ ಚಮಚ ಅಡುಗೆ ಸೋಡಾವನ್ನು ಅರ್ಧ ಕಪ್ ನೀರಿನಲ್ಲಿ ಬೆರೆಸಿ ಕುಡಿಯಿರಿ. ವಾರದಲ್ಲಿ ಸುಮಾರು 2 ಬಾರಿ ಮಾತ್ರ ಇದನ್ನು ಸೇವಿಸಿ.