ಅಡುಗೆ ಮನೆಯ ಶೆಲ್ಫ್‌ಗಳಲ್ಲಿ ಧೂಳು, ಕೊಳಕು, ಜಿಡ್ಡು, ಎಣ್ಣೆ ಕಲೆಗಳು ಸಾಮಾನ್ಯ. ಇದನ್ನು ನಿತ್ಯವೂ ಸ್ವಚ್ಛ ಮಾಡುವುದು ಕಷ್ಟ. ಶೆಲ್ಫ್‌ಗಳನ್ನು ಸ್ವಚ್ಛ ಮಾಡಲು ಕೆಲ ವಿಧಾನ ಅನುಸರಿದರೆ ಕೆಲಸ ಸುಲಭವಾಗುತ್ತದೆ.
* ಅಡುಗೆ ಮನೆಯಲ್ಲಿ ಶೆಲ್ಫ್‌ಗಳು ಮುಖ್ಯ ಪಾತ್ರವನ್ನು ವಹಿಸುವುದರಿಂದ ಇವುಗಳ ಸ್ವಚ್ಛತೆಗೆ ಗಮನ ನೀಡಬೇಕು. ಮರದ ಶೆಲ್ಫ್‌ಗಳಾಗಿದ್ದರೆ ಪಾಲಿಶಿಂಗ್ ಮತ್ತು ವ್ಯಾಕ್ಸ್ ಮಾಡಿಸಬೇಕಾಗುತ್ತದೆ. ಬ್ಲೀಚ್ ಇಲ್ಲದ ಆಂಟಿ ಬ್ಯಾಕ್ಟೀರಿಯಲ್ ಕ್ಲೀನರ್ ಅನ್ನು ಬಳಸಬಹುದು.
* ಶೆಲ್ಫ್‌ಗಳಿಗೆ ಪೇಂಟ್ ಮಾಡಿದ್ದೀರಿ ಎಂದಾದಲ್ಲಿ ಬಿಳಿ ವಿನಿಗರ್ ಅನ್ನು ಬಳಸಿ ಧೂಳು ಮತ್ತು ಗ್ರೀಸ್ ಅನ್ನುತೆಗೆಯಿರಿ. ಹೆಚ್ಚು ರಾಸಾಯನಿಕವಿರುವ ಕ್ಲೀನರ್‌ಗಳನ್ನು ಬಳಸಬೇಡಿ.
* 1 ಚಮಚ ಬ್ಲೀಚ್‌ಗೆ 1/4 ಭಾಗದಷ್ಟು ನೀರು ಹಾಕಿ ದ್ರಾವಣವನ್ನು ಸಿದ್ಧಪಡಿಸಿ. ಶೆಲ್ಫ್‌ಗಳ ಮೇಲ್ ಭಾಗವನ್ನು ಕ್ಲೀನರ್ ಸಹಾಯದಿಂದ ಸ್ವಚ್ಛಗೊಳಿಸಿ.
* ಯಾವತ್ತೂ ಶೆಲ್ಫ್‌ಗಳ ತುದಿ, ಅಂಚುಗಳಿಗೆ ಗಮನ ಕೊಡಲು ಮರೆಯದಿರಿ. ಈ ಸ್ಥಳಗಳಲ್ಲಿ ಅಡಗಿರುವ ಕೊಳೆಯನ್ನು ತೆಗೆಯಲು ಸಣ್ಣ ಬ್ರಶ್ ಅನ್ನು ಬಳಸಿ.
* ಶೆಲ್ಫ್‌ಗಳಲ್ಲಿರುವ ಕೊಳೆ ತುಂಬಾ ದಪ್ಪವಾಗಿದೆ ಎಂದಾದಲ್ಲಿ ಅದನ್ನು ತೆಗೆಯಲು ಬೇಕಿಂಗ್ ಸೋಡಾ ಮತ್ತು ನೀರಿನ ಮಿಶ್ರಣವನ್ನು ಬಳಸಿ. ಈ ಎರಡೂ ಸಾಮಾಗ್ರಿಗಳ ಪೇಸ್ಟ್ ಧೂಳು ಮತ್ತು ಕೊಳೆಯನ್ನು ನಿವಾರಿಸುವಲ್ಲಿ ಸಹಕಾರಿ. ಕೊಳೆಯನ್ನು ನಿವಾರಿಸಿ ಶೆಲ್ಫ್‌ಗೆ ಹೊಳಪನ್ನು ನೀಡುತ್ತದೆ.
* ಶೆಲ್ಫ್‌ಗಳ ಕೊಳೆಯನ್ನು ನಿವಾರಿಸಲು ಲಿಂಬೆ ರಸವನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಒದ್ದೆ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಕೊಳೆ ಒರೆಸಿ ನಂತರ ಲಿಂಬೆಯನ್ನು ಬಳಸಿ ಉಜ್ಜಿ.