ಅಡುಗೆ ಮನೆಯ ಕಪಾಟಿನಲ್ಲಿ ಆಹಾರ ಪದಾರ್ಥಗಳನ್ನು ಇಡುತ್ತೇವೆ. ಆ ವೇಳೆ ಅಲ್ಲಿ ಆಹಾರ ಚೆಲ್ಲಿ ಕೆಲವೊಮ್ಮೆ ವಾಸನೆ ಬರುತ್ತದೆ. ಆಗ ಆ ವಾಸನೆಯನ್ನು ನಿವಾರಿಸುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಕಪಾಟನ್ನು ಸ್ವಚ್ಛಗೊಳಿಸಿ ಅಲ್ಲಿ ಬರುವ ವಾಸನೆಯನ್ನು ಹೋಗಲಾಡಿಲಸಲು ಈ ಸಲಹೆ ಪಾಲಿಸಿ.
ಅಡುಗೆ ಮನೆಯ ಕಪಾಟನ್ನು ಸ್ವಚ್ಛಗೊಳಿಸುವಾಗ ಅಡುಗೆ ಸೋಡಾ ಮಿಶ್ರಣ ಮಾಡಿದ ನೀರಿನಿಂದ ತೊಳೆಯಿರಿ. ಇಲ್ಲವಾದರೆ ಅಡುಗೆ ಸೋಡಾವನ್ನು ಕಪಾಟಿನಲ್ಲಿಡಿ. ಇದು ವಾಸನೆಯನ್ನು ಹೀರಿಕೊಳ್ಳುತ್ತದೆ.
ಕೆಲವೊಮ್ಮೆ ಒದ್ದೆ ಪಾತ್ರೆಗಳನ್ನು ಕಪಾಟಿನಲ್ಲಿ ಇಡುವುದರಿಂದ ಅಲ್ಲಿ ವಾಸನೆ ಬರುತ್ತದೆ. ಮತ್ತು ಜಿರಳೆಗಳು ಹೆಚ್ಚಾಗಿ ಬರುತ್ತವೆ. ಹಾಗಾಗಿ ಪಾತ್ರೆಗಳನ್ನು ಚೆನ್ನಾಗಿ ಒರೆಸಿ ಇಡಿ. ಹಾಗೇ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಕಪಾಟನ್ನ ವಿನೆಗರ್ ಬಳಸಿ ಕೂಡ ಸ್ವಚ್ಛಗೊಳಿಸಬಹುದು.
ಹಾಗೇ ಕೋಣೆಯ ವಾಸನೆ ಹೋಗಲಾಡಿಸಲು ಫ್ರೆಶನರ್ ಬಳಸುವಂತೆ ಅಡುಗೆ ಮನೆಯ ಕಪಾಟಿನ ವಾಸನೆಯನ್ನು ಹೋಗಲಾಡಿಸಲು ಯಾವುದಾದರೂ ಪರಿಮಳಯುಕ್ತವಾದ ಎಸೆನ್ಷಿಯಲ್ ಆಯಿಲ್ ಬಳಸಿ ಕಪಾಟನ್ನು ಸ್ವಚ್ಛಗೊಳಿಸಬಹುದು. ಮತ್ತು ಹತ್ತಿಯಲ್ಲಿ ಈ ಆಯಿಲ್ ಅನ್ನು ತೆಗೆದುಕೊಂಡು ಕಪಾಟಿನ ಮೂಲೆಯಲ್ಲಿಡಬಹುದು.