ಮನೆಯಲ್ಲಿ ರುಚಿ ರುಚಿಯಾದ ಅಡುಗೆ ಮಾಡಿಕೊಂಡು ತಿನ್ನುತ್ತೇವೆ. ಆದರೆ ಪಾತ್ರೆಗೆ ಅಂಟಿಕೊಂಡಿದ್ದ ಜಿಡ್ಡು, ಬಟ್ಟೆಯಲ್ಲಿ ಅಂಟಿಕೊಂಡಿರುವ ಕಲೆ ಇವುಗಳನ್ನು ಕ್ಲೀನ್ ಮಾಡುವುದೇ ದೊಡ್ಡ ತಲೆನೋವು ಆಗಿರುತ್ತದೆ.
ಸುಲಭವಾಗಿ ಇದನ್ನೆಲ್ಲಾ ಕ್ಲೀನ್ ಮಾಡುವುದಕ್ಕೆ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ.
ಟೇಬಲ್ ಮೇಲೆ ಅಥವಾ ಅಡುಗೆ ಮನೆ ಶೆಲ್ಪ್ ಮೇಲೆ ಟೀ, ಕಾಫಿ ಬಿದ್ದು ಕಲೆಯಾಗಿರುತ್ತದೆ ಇದನ್ನು ತೆಗೆಯಲು ಸ್ವಲ್ಪ ಟಾಲ್ಕಂ ಪೌಡರ್ ಅನ್ನು ಅಲ್ಲಿ ಹಾಕಿ ನಂತರ ಬಟ್ಟೆಯಿಂದ ಒರೆಸಿ ತೆಗೆಯಿರಿ ಹೀಗೆ ಮಾಡುವುದರಿಂದ ಬೇಗನೆ ಕಲೆ ಹೋಗುತ್ತದೆ.
ಪಾತ್ರೆ ತೊಳೆಯುವ ಬ್ರಷ್ ನಲ್ಲಿ ವಾಸನೆ ಬರುತ್ತಿದ್ದರೆ ಒಂದು ಕಪ್ ನೀರಿಗೆ ಸ್ವಲ್ಪ ಲಿಂಬೆ ಹಣ್ಣಿನ ರಸ, ವಿನೇಗರ್ ಹಾಕಿ ಅದರಲ್ಲಿ ಬ್ರಷ್ ಅನ್ನು ನೆನೆಸಿಡಿ. ಇದರಿಂದ ವಾಸನೆ ಹೋಗುತ್ತದೆ.
ಕನ್ನಡಿ ಮಸುಕು ಮಸುಕಾಗಿದ್ದರೆ ಒಂದು ನ್ಯೂಸ್ ಪೇಪರ್ ತೆಗೆದುಕೊಂಡು ಅದರಿಂದ ಕನ್ನಡಿಯನ್ನು ಉಜ್ಜಿ.
ಚಾಕುವಿನಲ್ಲಿರುವ ಕಲೆಯನ್ನು ತೆಗೆಯಲು ಅದಕ್ಕೆ ಒಂದು ಈರುಳ್ಳಿಯನ್ನು ಕತ್ತರಿಸಿಕೊಂಡು ಅದರಿಂದ ಉಜ್ಜಿ ಕಲೆ ಹೋಗುತ್ತದೆ.
ಒಂದು ಪಾತ್ರೆಗೆ ನೀರು ಹಾಕಿಕೊಂಡು ಅದಕ್ಕೆ 2 ಸ್ಪೂನ್ ವಿನೇಗರ್ ಹಾಕಿ ಈ ನೀರಿನಿಂದ ಅಡುಗೆ ಮನೆ ಟೈಲ್ಸ್ ಕ್ಲೀನ್ ಮಾಡಿದರೆ ಕಲೆ, ಜಿಡ್ಡುಗಳು ಹೋಗುತ್ತದೆ.