ನಮ್ಮ ಆರೋಗ್ಯವನ್ನು ಹಲವು ಬಾರಿ ನಾವೇ ಹಾಳು ಮಾಡಿಕೊಳ್ಳುತ್ತೇವೆ. ಕೆಲವು ಆಹಾರಗಳನ್ನು ತಪ್ಪು ವಿಧಾನದಲ್ಲಿ ಸೇವಿಸುವ ಮೂಲಕ ತ್ವಚೆ ಹಾಗೂ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುತ್ತೇವೆ. ಅಂತಹ ತಪ್ಪುಗಳು ಯಾವುದು ನೋಡೋಣ.
ಗಾಯವಾಗಿ ದೇಹದಿಂದ ರಕ್ತ ಸೋರಿದಾಗ, ಬಾಯಿ ಹೆಚ್ಚು ಖಾರವಾದಾಗ ಒಂದು ಚಮಚ ಸಕ್ಕರೆಯನ್ನು ಬಾಯಿಗೆ ಹಾಕಿಕೊಳ್ಳುತ್ತೇವೆ. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಹೆಚ್ಚಿನ ಸಿಹಿ ಅಥವಾ ಐಸ್ಕ್ರಿಮ್ ದೇಹದ ರಕ್ತದ ಪ್ರಮಾಣವನ್ನು ಹೆಚ್ಚಿಸಿ ದೀರ್ಘಕಾಲದ ಸಮಸ್ಯೆಯನ್ನು ತಂದೊಡ್ಡುತ್ತದೆ.
ಬೆಳಗಿನ ತಿಂಡಿಗೆ ಪಾಸ್ತಾ, ಬಿಳಿ ಬ್ರೆಡ್ ಸೇವಿಸುವುದು ರಕ್ತದ ಸಕ್ಕರೆಯ ಅಂಶ ತ್ವರಿತವಾಗಿ ಏರಲು ಕಾರಣವಾಗುತ್ತದೆ.
ಹಣ್ಣುಗಳನ್ನು ಆಯಾ ರೂಪದಲ್ಲಿ ಸೇವಿಸಬೇಕೇ ಹೊರತು ಅದರ ಜ್ಯೂಸ್ ಅಥವಾ ರಸ ತೆಗೆದಿಟ್ಟು ಬೇಕಿದ್ದಾಗ ಜ್ಯೂಸ್ ರೂಪದಲ್ಲಿ ಸೇವಿಸಬಾರದು.
ಸೋಡಾ ಮತ್ತು ಮಳಿಗೆಗಳಲ್ಲಿ ಸಿಗುವ ರೆಡಿ ಜ್ಯೂಸ್ ಗಳನ್ನು ಸಾಧ್ಯವಾದಷ್ಟು ದೂರವಿಡಬೇಕು. ಈ ಮೂಲಕ ಉತ್ತಮ ಆರೋಗ್ಯ ಮತ್ತು ಸುಂದರ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು.