ಮನೆ ಸುಂದರವಾಗಿ ಕಾಣಬೇಕು ಅಂತಾ ಸಾಕಷ್ಟು ಫೋಟೋಗಳನ್ನು ಗೋಡೆಯ ಮೇಲೆ ನೇತು ಹಾಕುತ್ತೇವೆ. ಆದರೆ ವಾಸ್ತು ಶಾಸ್ತ್ರದಲ್ಲಿ ಈ ಫೋಟೋಗಳಿಗೂ ಅದರದ್ದೇ ಆದ ಸ್ಥಾನವಿದೆ. ಅದರಲ್ಲೂ ವಿಶೇಷವಾಗಿ ಅಡುಗೆ ಮನೆಯ ವಾಸ್ತು ಮನೆಯವರ ನೆಮ್ಮದಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಅಡುಗೆ ಕೋಣೆಯ ವಿಚಾರದಲ್ಲಿ ನೀವು ಎಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ.
ಅಡುಗೆ ಕೋಣೆ ಎಲ್ಲರಿಗೂ ಅನ್ನ ನೀಡುವ ಸ್ಥಾನವಾದ್ದರಿಂದ ಇಲ್ಲಿ ಅನ್ನಪೂರ್ಣೆಯ ಫೋಟೋವನ್ನು ನೇತು ಹಾಕಬೇಕು. ಈ ರೀತಿ ಫೋಟೋವನ್ನು ಅಡುಗೆ ಕೋಣೆಯಲ್ಲಿ ನೇತು ಹಾಕೋದ್ರಿಂದ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಹಣ ಹಾಗೂ ಆಹಾರ ಧಾನ್ಯದ ಕೊರತೆ ಕಂಡು ಬರೋದಿಲ್ಲ. ಮಾತ್ರವಲ್ಲದೇ ಮನೆಯಲ್ಲಿ ಸಂತಸ ನೆಲೆಸಲಿದೆ.
ಇದನ್ನು ಹೊರತುಪಡಿಸಿ ಅಡುಗೆ ಕೋಣೆಯನ್ನು ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲೇ ನಿರ್ಮಾಣ ಮಾಡಬೇಕು. ಒಂದು ವೇಳೆ ನಿಮ್ಮ ಮನೆಯ ಅಡುಗೆ ಕೋಣೆ ಬೇರೆ ದಿಕ್ಕಿನಲ್ಲಿ ನಿರ್ಮಾಣವಾಗಿದ್ದರೆ ಅಥವಾ ಇನ್ನಿತರ ಯಾವುದೇ ವಾಸ್ತು ದೋಷವಿದ್ದರೆ ಕೆಂಪು ಬಣ್ಣದ ಗಣೇಶನ ಫೋಟೋವನ್ನು ಅಡುಗೆ ಕೋಣೆಯ ಈಶಾನ್ಯ ದಿಕ್ಕಿನಲ್ಲಿ ನೇತು ಹಾಕಿ.