ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ನಿಯಮಿತವಾಗಿ ಬಳಸುವ ಮೂಲಕ ನೀವು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅವುಗಳು ಯಾವುವೆಂದು ತಿಳಿಯೋಣ.
ಮೊದಲಿಗೆ ಬೆಳ್ಳುಳ್ಳಿ. ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಬೆಳ್ಳುಳ್ಳಿಯನ್ನು ಜಗಿದು ತಿನ್ನುವುದರಿಂದ ಹಲವು ರೋಗಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಕಡಿಮೆಯಾಗಿ ನಿಮ್ಮ ದೇಹ ತೂಕವೂ ಇಳಿಯುತ್ತದೆ.
ಇದನ್ನು ಜಜ್ಜಿ ಬಿಸಿ ನೀರಿಗೆ ಹಾಕಿ, ಜೊತೆಗೆ ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ದೇಹದ ಹೆಚ್ಚುವರಿ ಕೊಬ್ಬು ಕರಗುತ್ತದೆ. ಇದನ್ನು ಬಿಡದೆ ಒಂದು ತಿಂಗಳು ಮಾಡುವುದರಿಂದ ದೇಹ ತೂಕ ಖಚಿತವಾಗಿ ಇಳಿಯುತ್ತದೆ.
ಜೇನುತುಪ್ಪದೊಂದಿಗೆ ಎರಡು ಎಸಳು ಹಸಿ ಬೆಳ್ಳುಳ್ಳಿ ಸೇವಿಸುವುದರಿಂದಲೂ ರಕ್ತದೊತ್ತಡದಂಥ ಸಮಸ್ಯೆ ದೂರವಾಗಿ ಕೊಬ್ಬು ಇಳಿಯುತ್ತದೆ.
ಇದೊಂದು ಟಾನಿಕ್ ನಂತೆ ಕೆಲಸ ಮಾಡಿ ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ಇಳಿಸುತ್ತದೆ. ಒಂದು ಗಾಜಿನ ಡಬ್ಬಿಗೆ ಬೆಳ್ಳುಳ್ಳಿ ಸಿಪ್ಪೆ ತೆಗೆದು ಹಾಕಿ ಮೇಲೆ ಜೇನುತುಪ್ಪ ಸುರಿದು ಗಟ್ಟಿಯಾಗಿ ಮುಚ್ಚಿಟ್ಟರೆ ತಿಂಗಳ ತನಕವೂ ನಿತ್ಯ ಇದನ್ನು ಬಳಸಬಹುದು.