ಅಡುಗೆ ಮನೆಯಲ್ಲಿ ಕಷ್ಟ ಎನಿಸುವ ಕೆಲಸವನ್ನು ಸುಲಭ ಮಾಡಿಕೊಂಡು ಆದಷ್ಟು ಬೇಗ ಅಲ್ಲಿನ ಕೆಲಸವನ್ನು ಮುಗಿಸುವುದು ಹೇಗೆ ನೋಡೋಣ.
ಪಾಲಕ್ ಸೊಪ್ಪನ್ನು ಬೇಯಿಸಿ ರುಬ್ಬುವ ಬದಲು, ಮೊದಲು ರುಬ್ಬಿ ಬಳಿಕ ಬೇಯಿಸಿದರೆ ಅದರ ಹಸಿರು ಬಣ್ಣ ಹೋಗದೆ ಹಾಗೆಯೇ ಉಳಿಯುತ್ತದೆ. ಆಲೂ ಪಾಲಕ್ ತಯಾರಿಸುವಾಗ ಪಾಲಕ್ ಸೊಪ್ಪನ್ನು ಬಿಸಿ ನೀರಿನಲ್ಲಿ ಅದ್ದಿ ಐದು ನಿಮಿಷ ಬಳಿಕ ಬೇಯಿಸಲು ಇಟ್ಟರೂ ಹಸಿರು ಹೋಗುವುದಿಲ್ಲ.
ಗಟ್ಟಿಯಾಗಿರುವ ಬಾದಾಮಿ ಸ್ಲೈಸ್ ತಯಾರಿಸಲು ಕಷ್ಟ ಎನಿಸಿದರೆ ಅದನ್ನು ಕತ್ತರಿಸುವ ಒಂದು ಗಂಟೆ ಮುನ್ನ ಫ್ರಿಜ್ ನಲ್ಲಿಡಿ. ಅಗ ತೆಳುವಾಗಿ ಕತ್ತರಿಸುವುದು ಸುಲಭವಾಗುತ್ತದೆ.
ತೊಗರಿ ಬೇಳೆ ಅಥವಾ ಹೆಸರು ಬೇಳೆ ಬೇಯಲು ಕುಕ್ಕರ್ ನಲ್ಲಿ ಇಡುವಾಗ ಚಿಟಿಕೆ ಅರಶಿನ ಮತ್ತು ಒಂದು ಚಮಚ ತೆಂಗಿನೆಣ್ಣೆ ಸೇರಿಸುವುದರಿಂದ ಬೇಳೆ ಬೇಗ ಬೇಯುತ್ತದೆ.
ಚಳಿಗಾಲದಲ್ಲಿ ಹಿಟ್ಟು ಬೇಗ ಉಬ್ಬಬೇಕಿದ್ದರೆ ಅಕ್ಕಿ ರುಬ್ಬುವಾಗ ತುಸು ಬಿಸಿನೀರು ಸೇರಿಸಿ. ಅಥವಾ ರುಬ್ಬಿದ ಬಳಿಕ ಬಿಸಿ ನೀರಿನ ಮೇಲೆ ಇಡಿ. ಹಸಿಮೆಣಸನ್ನು ತೊಟ್ಟು ತೆಗೆದು ಸ್ಟೀಲ್ ಡಬ್ಬಿಯಲ್ಲಿ ಹಾಕಿಟ್ಟರೆ ಹೆಚ್ಚು ದಿನ ಬಾಳಿಕೆ ಬರುತ್ತದೆ.