ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಕೆಲವು ವಿಶೇಷ ನಿಯಮಗಳನ್ನು ಸರಿಯಾಗಿ ಅನುಸರಿಸಿದರೆ ಲಕ್ಷ್ಮಿದೇವಿಯು ಮನೆಯಲ್ಲಿ ನೆಲೆಸುತ್ತಾಳೆ. ಲಕ್ಷ್ಮಿಯ ಕಟಾಕ್ಷಕ್ಕಾಗಿ ಮನೆಯಲ್ಲಿ ಎಲ್ಲಾ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿಡಬೇಕು. ವಸ್ತುಗಳನ್ನು ಅಲಂಕರಿಸುವ ದಿಕ್ಕನ್ನು ತಿಳಿದಿರಬೇಕು. ಅಂತಹ ಐದು ವಾಸ್ತು ನಿಯಮಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರವನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಮನೆಗೆ ಲಕ್ಷ್ಮಿ ದೇವಿಯು ಪ್ರವೇಶಿಸಬೇಕೆಂದು ಬಯಸಿದರೆ ಮತ್ತು ಧನಾತ್ಮಕ ಶಕ್ತಿಯ ಹರಿವು ಇರಬೇಕೆಂದರೆ ಯಾವಾಗಲೂ ಮುಖ್ಯದ್ವಾರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಮುಖ್ಯ ದ್ವಾರದಲ್ಲಿ ಕತ್ತಲೆ ಇರದಂತೆ ಎಚ್ಚರ ವಹಿಸಿ. ಕತ್ತಲೆಯು ಬಡತನವನ್ನು ಸೂಚಿಸುತ್ತದೆ. ಆದ್ದರಿಂದ ಈ ಸ್ಥಳವನ್ನು ಸಂಪೂರ್ಣ ಬೆಳಕಿನಿಂದ ತುಂಬಿಸಿ.
ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರುವುದು ಶುಭವೆಂದು ಪರಿಗಣಿಸಲಾಗಿದೆ. ದಕ್ಷಿಣಾಭಿಮುಖವಾಗಿ ಬಾಗಿಲು ಹಾಕಬೇಡಿ. ಹಾಗೆ ಮಾಡಿದರೆ ನಕಾರಾತ್ಮಕ ಶಕ್ತಿ ಒಳಗೆ ಬರಬಹುದು.
ವಾಸ್ತುಶಾಸ್ತ್ರದ ದೇವರಮನೆ ಈಶಾನ್ಯ ದಿಕ್ಕಿನಲ್ಲಿರಬೇಕು. ದೇವರಮನೆಯಲ್ಲಿ ಲಕ್ಷ್ಮಿ ಜೊತೆಗೆ ಗಣೇಶನ ವಿಗ್ರಹವೂ ಇರಬೇಕು ಎಂಬುದನ್ನು ನೆನಪಿನಲ್ಲಿಡಿ.
ವಾಸ್ತುಶಾಸ್ತ್ರದಲ್ಲಿ ಅಡುಗೆ ಮನೆಗೂ ಸರಿಯಾದ ದಿಕ್ಕು ಯಾವುದೆಂದು ಪರಿಗಣಿಸಲಾಗಿದೆ. ಅಡುಗೆಮನೆ ಇಡೀ ಮನೆಗೆ ಹೃದಯವಿದ್ದಂತೆ. ಇದು ಹಣದ ಹರಿವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಡುಗೆ ಲಕ್ಷ್ಮಿದೇವಿಗೆ ನೇರವಾಗಿ ಸಂಬಂಧಿಸಿದೆ. ಆದ್ದರಿಂದ ಮನೆಯ ಆಗ್ನೇಯ ಮೂಲೆಯಲ್ಲಿ ಅಡುಗೆಮನೆ ಇರಬೇಕು.