ಅಡುಗೆ ಮನೆ, ಮನೆಯ ಮುಖ್ಯ ಜಾಗದಲ್ಲಿ ಒಂದು. ಇಲ್ಲಿ ತಯಾರಾಗುವ ಅಡುಗೆ ನಮಗೆ ಶಕ್ತಿ ನೀಡುತ್ತದೆ. ಮುಂದೆ ಸಾಗಲು ನಮಗೆ ನೆರವಾಗುತ್ತದೆ. ಧರ್ಮಗ್ರಂಥಗಳಲ್ಲಿ ಅಡುಗೆ ಮನೆಯ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹೇಳಲಾಗಿದೆ.
ಅಡುಗೆಮನೆಯಲ್ಲಿ ವಾಸ್ತು ದೋಷವಿದ್ದರೆ ನಕಾರಾತ್ಮಕ ಶಕ್ತಿ ನಿಮ್ಮ ಮನೆಯನ್ನು ಆವರಿಸುತ್ತದೆ. ಇಡೀ ಕುಟುಂಬ ಇದ್ರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಅಡುಗೆ ಮನೆಯಿಂದ ಯಾವುದೇ ಸಮಸ್ಯೆ ಆಗಬಾರದು ಎಂದುಕೊಳ್ಳುವವರು ಅಡುಗೆ ಮನೆಯಲ್ಲಿ ಕೆಲ ವಸ್ತುಗಳನ್ನು ಅಪ್ಪಿತಪ್ಪಿಯೂ ಇಡಬಾರದು.
ಮುರಿದ ಅಥವಾ ಒಡೆದ ಪಾತ್ರೆಗಳನ್ನು ಎಂದಿಗೂ ಬಳಸಬಾರದು. ಬಳಸದೆ ಮನೆಯಲ್ಲಿಟ್ಟರೂ ಒಳ್ಳೆಯದಲ್ಲ. ಇದನ್ನು ಹೊರಹಾಕಬೇಕು.
ಅನೇಕ ಜನರು ಔಷಧಿಗಳು, ಬ್ಯಾಂಡೇಜ್ ಗಳು ಅಥವಾ ಟ್ಯೂಬ್ ಗಳನ್ನು ಅಡುಗೆ ಮನೆಯಲ್ಲಿ ಇಡ್ತಾರೆ. ಆದ್ರೆ ಇದರಿಂದ ಸಮಸ್ಯೆಯಾಗುತ್ತೆ. ಕುಟುಂಬ ಸದಸ್ಯರೆಲ್ಲ ಕಾಯಿಲೆ ಬೀಳುವ ಸಾಧ್ಯತೆಯಿರುತ್ತದೆ.
ಅಡುಗೆ ಮನೆಯಲ್ಲಿ ಬಳಸದ ವಸ್ತುಗಳನ್ನು ಇಡಬಾರದು. ಇದು ತಾಯಿ ಅನ್ನಪೂರ್ಣೇಶ್ವರಿ ಕೋಪಕ್ಕೆ ಕಾರಣವಾಗುತ್ತದೆ. ಅಡುಗೆಮನೆಯಲ್ಲಿ ಯಾವಾಗಲೂ ಉಪಯುಕ್ತ ಮತ್ತು ಒಳ್ಳೆಯ ವಸ್ತುಗಳನ್ನು ಇರಿಸಿ. ಅಲ್ಲದೆ, ಅದನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ರಾತ್ರಿಯಿಡೀ ಅಡುಗೆಮನೆಯಲ್ಲಿ ಉಳಿದಿರುವ ಪಾತ್ರೆಗಳು ಲಕ್ಷ್ಮಿ ದೇವಿಯ ಕೋಪದಿಂದ ಆರ್ಥಿಕ ಅಸಂಕಷ್ಟಕ್ಕೆ ಕಾರಣವಾಗುತ್ತದೆ.