
ರಿಫೈನ್ಡ್ ಎಣ್ಣೆಯನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ, ಇದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯ ತಜ್ಞರಿಂದ ಕೇಳಿಬಂದಿದೆ. ಹಿಂದೆ ಬಳಸುತ್ತಿದ್ದ ಎಣ್ಣೆಗಳೇ ಉತ್ತಮ ಎಂದು ಹೇಳಲಾಗಿದೆ.
ಸಾರ್ವಜನಿಕ ಆರೋಗ್ಯ ಪೌಷ್ಠಿಕ ಸಲಹೆಗಾರರ ಮಾತಿನಲ್ಲೇ ಹೇಳುವುದಾದರೆ, ರಿಫೈನ್ಡ್ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿದರೆ ಒಳ್ಳೆಯದು. ಆರೋಗ್ಯಕರ ಜೀವನಕ್ಕಾಗಿ ತುಪ್ಪ ಮೊದಲಾದ ವನಸ್ಪತಿಗಳಿಂದ ಮಾಡುವ ಭಾರತೀಯ ಆಹಾರ ಪದ್ಧತಿ ಉತ್ತಮ ಎಂದು ಹೇಳಲಾಗಿದೆ.
ಅಡುಗೆ ಎಣ್ಣೆಯನ್ನು ಶುದ್ಧೀಕರಿಸುವ ಸಂದರ್ಭದಲ್ಲಿ ಹೆಚ್ಚಿನ ಉಷ್ಣಾಂಶದಲ್ಲಿ ಕಾಯಿಸುವುದರಿಂದ ಅದು ವಿಷವಾಗಬಹುದಾದ ಸಾಧ್ಯತೆ ಕೂಡ ಇರುತ್ತದೆ. ರಿಫೈನ್ಡ್ ಎಣ್ಣೆಗಳಿಗಿಂತ ಹಿಂದೆ ಬಳಸಲ್ಪಡುತ್ತಿದ್ದ ಎಣ್ಣೆಗಳೇ ಉತ್ತಮ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.