ದೋಸೆ, ಆಮ್ಲೆಟ್ ನಿಂದ ಹಿಡಿದು ಪಲ್ಯ, ಕೇಕ್ ತಯಾರಿವರೆಗೆ ನಾನ್ ಸ್ಟಿಕ್ ಪಾನ್ ಗಳನ್ನು ಹೆಚ್ಚಿನ ಜನ ಬಳಸುತ್ತಾರೆ. ಬಹುಬೇಕ ತಳ ಹಿಡಿಯುವುದಿಲ್ಲ ಎಂಬುದೊಂದು ಇದರ ಲಾಭ.
ಇದರಿಂದ ತಯಾರಾದ ಅಡುಗೆಯಿಂದ ಏನೆಲ್ಲಾ ತೊಂದರೆಗಳಾಗುತ್ತವೆ ಎಂಬುದು ನಿಮಗೆ ಗೊತ್ತೇ?
ಇದರ ಒಳಭಾಗದಲ್ಲಿ ಆಹಾರಗಳು ಅಂಟದಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತದೆ. ಇದರ ಒಳಭಾಗ ನಯವಾಗಿರುತ್ತದೆ ಮತ್ತು ತಿನಿಸು ಬಹುಬೇಗ ಬೇಯುವಂತಿರುತ್ತದೆ.
ನಾಲ್ಕೈದು ವರ್ಷದ ಹಿಂದಿನ ತನಕ ಪಿ ಎಫ್ ಒ ಎ ಎಂಬ ರಾಸಾಯನಿಕದ ಲೇಯರ್ ಅನ್ನು ಇದರ ತಯಾರಿ ವೇಳೆ ಬಳಸಲಾಗುತ್ತಿತ್ತು. ಇದು ಹಲವು ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡುತ್ತಿತ್ತು. ಬಳಿಕ ಇದನ್ನು ನಿಷೇಧಿಸಲಾಯಿತು.
ಹಳತಾದಂತೆ, ಬಿರುಕು ಬಿಟ್ಟಾಗ, ಮಧ್ಯಭಾಗ ಉಬ್ಬಿಕೊಂಡ ಬಳಿಕ ಇದರ ಬಳಸಬೇಡಿ. ಸೂಕ್ಷ್ಮ ದೇಹಿಗಳಿಗೆ ಇದರಲ್ಲಿ ತಯಾರಿಸಿದ ಆಹಾರದ ಸೇವನೆಯಿಂದ ತಲೆನೋವು, ಜ್ವರದಂತಹ ಲಕ್ಷಣಗಳು ಕಂಡುಬಂದಾವು.