ಚಪ್ಪಲಿ ಅಥವಾ ಶೂ ಖರೀದಿ ಮಾಡಲು ಹೋದಾಗ ಮೊದಲು ನಮ್ಮ ಮನಸ್ಸಿಗೆ ಬರುವುದು ಅಡಿಡಾಸ್, ಪೂಮಾ, ಬಾಟಾ ಮತ್ತು ನೈಕಿಯಂತಹ ಬ್ರಾಂಡ್‌ಗಳ ಹೆಸರು. ಈ ಕಂಪನಿಗಳು ದೇಶ ಮತ್ತು ವಿದೇಶಗಳಲ್ಲಿ ಪಾದರಕ್ಷೆಗಳ ಮಾರುಕಟ್ಟೆಯನ್ನು ದೀರ್ಘಕಾಲದಿಂದಲೂ ಆಕ್ರಮಿಸಿಕೊಂಡಿವೆ. ಆದರೆ ಕೆಲವು ಭಾರತೀಯ ಉದ್ಯಮಿಗಳು ಈ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡ್ತಿದ್ದಾರೆ. ಈ ಮೇಡ್ ಇನ್ ಇಂಡಿಯಾ ಬ್ರಾಂಡ್‌ಗಳು ಕೂಡ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ.
ಈ ಕಂಪನಿಗಳ ಪಾದರಕ್ಷೆಗಳಿಗೆ ವಿದೇಶಗಳಲ್ಲೂ ಬೇಡಿಕೆ ಇದೆ. ಬ್ರ್ಯಾಂಡ್ ಮಾಲೀಕರು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸ್ತಿದ್ದಾರೆ. ಈ ಫೇಮಸ್ ಮೇಡ್ ಇನ್ ಇಂಡಿಯಾ ಬ್ರಾಂಡ್‌ಗಳು ಯಾವುವು, ಅವುಗಳ ಮಾಲೀಕರ ಗಳಿಕೆ ಎಷ್ಟು ಅನ್ನೋದನ್ನು ನೋಡೋಣ.
ರೆಡ್ ಚೀಫ್ – ಮನೋಜ್ ಜ್ಞಾನಚಂದಾನಿ
ಮನೋಜ್ ಜ್ಞಾನಚಂದಾನಿ ಅವರೇ ಹುಟ್ಟುಹಾಕಿದ ಫುಟ್‌ವೇರ್ ಬ್ರಾಂಡ್ ಇದು. 1995ರಲ್ಲಿ ರೆಡ್ ಚೀಫ್ ಮಾಲೀಕ ಮನೋಜ್ ಜ್ಞಾನಚಂದಾನಿ ಯುರೋಪ್‌ಗೆ ಚರ್ಮದ ಪಾದರಕ್ಷೆಗಳನ್ನು ರಫ್ತು ಮಾಡಲು ಲಿಯಾನ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಅನ್ನು ಪ್ರಾರಂಭಿಸಿದರು. 1997ರಲ್ಲಿ ಅವರು ಲಿಯಾನ್ ಗ್ಲೋಬಲ್ ಅಡಿಯಲ್ಲಿ ರೆಡ್ ಚೀಫ್ ಬ್ರ್ಯಾಂಡ್ ಅನ್ನು ಆರಂಭ ಮಾಡಿದ್ರು. 2011 ರಲ್ಲಿ, ಈ ಶೂ ವ್ಯಾಪಾರಿ ಕಾನ್ಪುರದಲ್ಲಿ ಮೊದಲ ವಿಶೇಷವಾದ ರೆಡ್ ಚೀಫ್ ಔಟ್ಲೆಟ್ ಅನ್ನು ಪ್ರಾರಂಭಿಸಿದರು. ಇಂದು ರೆಡ್ ಚೀಫ್, ಉತ್ತರ ಪ್ರದೇಶ ಸೇರಿದಂತೆ 16 ರಾಜ್ಯಗಳಲ್ಲಿ 175 ಮಳಿಗೆಗಳನ್ನು ಹೊಂದಿದೆ. ಕಂಪನಿಗಳ ರಿಜಿಸ್ಟ್ರಾರ್‌ನಲ್ಲಿ ಮಾಡಿದ ಫೈಲಿಂಗ್ ಪ್ರಕಾರ, 2021 ರಲ್ಲಿ ಕಂಪನಿ ವಾರ್ಷಿಕ 324 ಕೋಟಿಗೂ ಹೆಚ್ಚು ವಹಿವಾಟು ನಡೆಸಿದೆ.
ವುಡ್‌ಲ್ಯಾಂಡ್ – ಅವತಾರ್ ಸಿಂಗ್ವುಡ್‌ಲ್ಯಾಂಡ್ ಅನ್ನು ಕೆನಡಾದ ಕ್ವಿಬೆಕ್‌ನಲ್ಲಿ ಸ್ಥಾಪಿಸಲಾಯಿತು. ಆದರೆ ಅದರ ಅಡಿಪಾಯವು ಭಾರತದಿಂದಲೇ ಆಗಿದೆ. ಮೂಲತಃ ಭಾರತದವರಾದ ಅವತಾರ್ ಸಿಂಗ್ ಅವರು 1980ರಲ್ಲಿ ವುಡ್‌ಲ್ಯಾಂಡ್‌ನ ಮೂಲ ಕಂಪನಿ ಏರೋ ಗ್ರೂಪ್ ಅನ್ನು ಸ್ಥಾಪಿಸಿದರು.ಇದರ ಪ್ರಮುಖ ಉತ್ಪಾದನಾ ಕೇಂದ್ರ ನೋಯ್ಡಾದಲ್ಲಿದೆ. ವುಡ್‌ಲ್ಯಾಂಡ್ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ 8 ಕಾರ್ಖಾನೆಗಳನ್ನು ಹೊಂದಿದೆ. ವುಡ್‌ಲ್ಯಾಂಡ್ ವಾರ್ಷಿಕವಾಗಿ 1,250 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ.
ಲಖಾನಿ-ಪರಮೇಶ್ವರ್ ದಯಾಳ್ ಲಖಾನಿ ಲಖಾನಿಯನ್ನು 1966 ರಲ್ಲಿ ಪರಮೇಶ್ವರ ದಯಾಳ್ ಲಖಾನಿ ಪ್ರಾರಂಭಿಸಿದರು. ಲಖಾನಿ ಕುಟುಂಬದ ಎರಡನೇ ತಲೆಮಾರಿನ ಉದ್ಯಮಿ ಮಯಾಂಕ್ ಲಖಾನಿ ಸದ್ಯ ಕಂಪನಿಯ ಜವಾಬ್ಧಾರಿ ಹೊತ್ತಿದ್ದಾರೆ. ಈ ಕಂಪನಿಯ ಫುಟ್‌ವೇರ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ. ಲಖಾನಿ ಕಂಪನಿ ವಾರ್ಷಿಕವಾಗಿ 150 ರಿಂದ 200 ಕೋಟಿ ವಹಿವಾಟು ನಡೆಸುತ್ತದೆ.