ನೀವು ತಿಂದ ಆಹಾರ ಜೀರ್ಣವಾಗುತ್ತಿಲ್ಲವೆ, ಬೆಳಿಗ್ಗೆ ತಿಂದ ತಿಂಡಿ ಸಂಜೆಯಾದರೂ ಹೊಟ್ಟೆಯಲ್ಲಿದೆ ಎನಿಸುತ್ತಿದೆಯೇ, ಇದಕ್ಕೆ ಅಗ್ನಿಮಾಂದ್ಯ ಎಂದು ಕರೆಯುತ್ತಾರೆ. ನಾವು ತಿಂದಿರುವ ಆಹಾರ ಮೂರು ತಾಸಿನವರೆಗೆ ಜೀರ್ಣ ಆಗಬೇಕು. 6 ರಿಂದ 12 ತಾಸು ಆದರೂ ಜೀರ್ಣ ಆಗದಿದ್ದರೆ ಅಜೀರ್ಣ ಸಮಸ್ಯೆ ಕಾಡುತ್ತದೆ.
ಇದರ ಪರಿಹಾರಕ್ಕೂ ಮನೆಯಲ್ಲಿ ಮದ್ದಿದೆ. ಒಂದು ಚಮಚ ಜೀರಿಗೆಯನ್ನು ಜಜ್ಜಿ ಪುಡಿ ಮಾಡಿ, ಎರಡು ಲೋಟ ನೀರಿಗೆ ಹಾಕಿ ಮಂದ ಉರಿಯಲ್ಲಿ ಕುದಿಸಿ. ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಸೋಸಿ ದಿನಕ್ಕೆ ಮೂರು ಬಾರಿ ಕುಡಿಯಿರಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ.
ಇದಕ್ಕೆ ಇನ್ನೊಂದು ಮನೆ ಮದ್ದು ಕೂಡ ಇದೆ. ಅದು ಶುಂಠಿ. ಶುಂಠಿಯ ಪುಡಿಯನ್ನು ಎರಡು ಲೋಟ ನೀರಿಗೆ ಹಾಕಿ ಅದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿ. ಎರಡು ಲೋಟ ನೀರು ಒಂದು ಲೋಟ ಆಗಲಿ. ಇದನ್ನು ದಿನಕ್ಕೆರಡು ಬಾರಿ ಕುಡಿಯುವುದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ.