ನೆಲ್ಲಿಕಾಯಿ ಪೋಷಕಾಂಶಗಳ ಆಗರ. ಸಿಹಿ, ಹುಳಿ, ಕಹಿಯ ಸುವಾಸನೆ ಹಾಗೂ ಕಟುವಾದ ಅಂಶ ಅದರಲ್ಲಿದೆ. ನೆಲ್ಲಿಕಾಯಿಯ ಜ್ಯೂಸ್ ಮಾಡಿ ಕುಡಿಯಬಹುದು, ಹಸಿಯಾಗಿಯೇ ತಿನ್ನಬಹುದು ಅಥವಾ ಪೌಡರ್ ಮಾಡಿಟ್ಟುಕೊಂಡು ಕೂಡ ಬಳಸಬಹುದು. ನೆಲ್ಲಿಕಾಯಿ ಜ್ಯಾಮ್, ಉಪ್ಪಿನಕಾಯಿ ಹಾಗೂ ಕ್ಯಾಂಡಿ ಸಖತ್ ಫೇಮಸ್.
ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿ ಸುದ್ದಿ: ಶಾಲೆಗಳಲ್ಲಿ ಅಕ್ಟೋಬರ್ 21 ರಿಂದ ‘ಬಿಸಿಯೂಟ’ ಆರಂಭ
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಷಿಯಂ ಅಂಶ ಹೇರಳವಾಗಿದೆ. ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ನೆಲ್ಲಿಕಾಯಿ ಕಾಪಾಡುತ್ತದೆ. ಇದೊಂದು ಆ್ಯಂಟಿಒಕ್ಸಿಡೆಂಟ್. ನೆಲ್ಲಿಕಾಯಿಯನ್ನು ಪುಡಿ ಮಾಡಿಟ್ಟುಕೊಳ್ಳುವುದು ಬೆಸ್ಟ್ ಎನ್ನುತ್ತಾರೆ ವೈದ್ಯರು. ನೀವು ಅದಕ್ಕೆ ಶುಂಠಿ ಪುಡಿ, ಸ್ವಲ್ಪ ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬಹುದು. ಅಥವಾ ಬೆಳಗ್ಗೆ ಫ್ರೆಶ್ ಜ್ಯೂಸ್ ಗೆ ಒಂದು ಚಮಚ ನೆಲ್ಲಿಕಾಯಿ ಪುಡಿ ಮಿಕ್ಸ್ ಮಾಡಿಕೊಂಡು ಕುಡಿಯಿರಿ.
ಬಾಳೆಹಣ್ಣು, ಪಪ್ಪಾಯ ಮತ್ತು ಸೇಬುಹಣ್ಣಿನ ಹೋಳುಗಳ ಮೇಲೆ ನೆಲ್ಲಿಕಾಯಿ ಪುಡಿಯನ್ನು ಉದುರಿಸಿಕೊಂಡು ತಿನ್ನುವುದು ಕೂಡ ಉತ್ತಮ. ನೆಲ್ಲಿಕಾಯಿ ನಿಮ್ಮ ಇಮ್ಯೂನಿಟಿಯನ್ನು ಹೆಚ್ಚಿಸುತ್ತದೆ, ಹಾಗಾಗಿ ಇನ್ಫೆಕ್ಷನ್ ಗಳ ಭಯವಿರುವುದಿಲ್ಲ. ಹಾನಿಕಾರಕ ಕೊಲೆಸ್ಟ್ರಾಲ್ ಅನ್ನು ಕೂಡ ನೆಲ್ಲಿಕಾಯಿ ಕಡಿಮೆ ಮಾಡುವುದರಿಂದ ಹೃದಯದ ಸಮಸ್ಯೆಗಳು ಬರುವುದಿಲ್ಲ. ಮುಖಕ್ಕೆ ನೆಲ್ಲಿಕಾಯಿ ಪುಡಿ, ಮೊಸರು ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಮಾಸ್ಕ್ ಹಾಕಿಕೊಂಡ್ರೆ ಕಾಂತಿಯುಕ್ತವಾಗುತ್ತದೆ.
ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯುವತಿಯ ಮಸ್ತ್ ಸ್ಟೆಪ್ಸ್: ವಿಡಿಯೋ ವೈರಲ್
ನೆಲ್ಲಿಕಾಯಿ ಪುಡಿಯಲ್ಲಿ ಫೈಬರ್ ಅಂಶವಿರೋದ್ರಿಂದ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಮಲಬದ್ಧತೆಗೆ ಇದು ಅತ್ಯಂತ ಉತ್ತಮ ಮದ್ದು. ಆ್ಯಸಿಡಿಟಿ ಹಾಗೂ ಅಲ್ಸರ್ ಅನ್ನು ಕೂಡ ನೆಲ್ಲಿಕಾಯಿ ದೂರ ಮಾಡುತ್ತದೆ. ಜೇನುತುಪ್ಪದ ಜೊತೆ ನೆಲ್ಲಿಕಾಯಿ ಪೌಡರ್ ಸೇರಿಸಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ. ಬೆಲ್ಲದ ಜೊತೆಗೂ ಇದನ್ನು ತಿನ್ನಬಹುದು. ಕೂದಲು ಉದುರುವಿಕೆ, ತಲೆಹೊಟ್ಟನ್ನು ನೆಲ್ಲಿಕಾಯಿ ಹೋಗಲಾಡಿಸುತ್ತದೆ. ನೆಲ್ಲಿಕಾಯಿ ಪೌಡರ್, ಮೊಸರು ಮತ್ತು ಶೀಕಾಕಾಯಿ ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಳ್ಳಿ. ಅರ್ಧಗಂಟೆ ಬಿಟ್ಟು ಕೂದಲು ತೊಳೆಯಿರಿ.