ಮರಸೇಬು ಒಂದು ಸಾಮಾನ್ಯ ಹಣ್ಣು ಎಂಬ ಭಾವನೆ ಬಹುತೇಕರಲ್ಲಿದೆ. ಇದೇ ಕಾರಣಕ್ಕೆ ಬಹುತೇಕರು ಮರಸೇಬು ಸೇವನೆಗೆ ಹೆಚ್ಚು ಒತ್ತು ಕೊಡುವುದೇ ಇಲ್ಲ. ಇದರ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಕೂಡ ನಿಯಮಿತವಾಗಿ ಮರಸೇಬು ತಿನ್ನಲು ಶುರು ಮಾಡುವುದರಲ್ಲಿ ಅನುಮಾನವೇ ಇಲ್ಲ. ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಮಾವಿನ ಹಣ್ಣನ್ನು ಸೇವಿಸುತ್ತಾರೆ.
ಅದೇ ರೀತಿ ಮಾನ್ಸೂನ್‌ನಲ್ಲಿ ಬ್ಯಾಕ್ಟೀರಿಯಾ ಮುಕ್ತ, ದಿನವಿಡೀ ತಾಜಾತನವನ್ನು ನೀಡುವ ಮರಸೇಬುವನ್ನು ತಿನ್ನಬೇಕು. ಇದನ್ನು ಸೇವಿಸುವುದರಿಂದ ಹಲವಾರು ರೀತಿಯ ಕಾಯಿಲೆಗಳು ದೂರವಾಗುತ್ತವೆ. ಆಯುರ್ವೇದದಲ್ಲಿಯೂ ಇದಕ್ಕೆ ವಿಭಿನ್ನ ಸ್ಥಾನವಿದೆ.
ಬೊಜ್ಜು…
ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆಯಿಂದ ಜನರು ಹೆಚ್ಚು ತೊಂದರೆಗೊಳಗಾಗುತ್ತಿದ್ದಾರೆ. ಎಲ್ಲಾ ರೀತಿಯ ಡಯಟ್ ಮಾಡಿ ಗಂಟೆಗಟ್ಟಲೆ ಜಿಮ್ ಮಾಡಿದರೂ ಯಾವುದೇ ಪರಿಣಾಮವಾಗುವುದಿಲ್ಲ. ಅಂಥವರಿಗೆ ಈ ಮರಸೇಬು ರಾಮಬಾಣ. ತೂಕ ಹೆಚ್ಚಳದಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಮರಸೇಬುವನ್ನು ಸೇವಿಸಿ. ಅದರಲ್ಲಿರುವ ಅಂಶಗಳು ನಿಮ್ಮ ತೂಕವನ್ನು ಎರಡು ಪಟ್ಟು ವೇಗವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಹೃದಯಕ್ಕೆ ರಾಮಬಾಣ…
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಧೂಮಪಾನ ಮತ್ತು ಮದ್ಯಪಾನದ ಚಟ ಅಂಟಿಸಿಕೊಂಡಿರುತ್ತಾರೆ. ಇದು ಮೂತ್ರಪಿಂಡ ಮತ್ತು ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮರಸೇಬುವನ್ನು ತಿನ್ನಿ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ರಕ್ತವೂ ಶುದ್ಧವಾಗುತ್ತದೆ.
ಇಮ್ಯೂನಿಟಿ…
ಇತ್ತೀಚಿನ ದಿನಗಳಲ್ಲಿ ವೈರಸ್‌ಗಳ ಕಾಟ ಜಾಸ್ತಿಯಾಗಿದೆ. ಇದು ನಮ್ಮ ರೋಗನಿರೋಧಕ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅನೇಕ ರೀತಿಯ ಕಾಯಿಲೆಗಳಿಗೆ ನಾವು ತುತ್ತಾಗುತ್ತಿದ್ದೇವೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಮರಸೇಬು ಸೇವನೆ ಮಾಡಬೇಕು. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.