ಮಣಿಪುರದ ಇಂಫಾಲ್ ನಲ್ಲಿರುವ ಇಮಾ ಮಾರುಕಟ್ಟೆಗೆ ಹೋದ್ರೆ ನೀವು ಆಶ್ಚರ್ಯ ಚಕಿತರಾಗ್ತೀರಾ. ಮಾರುಕಟ್ಟೆಯ ಎಲ್ಲ ಅಂಗಡಿಗಳಲ್ಲೂ ಮಹಿಳೆಯರೇ ಕಾಣಸಿಗ್ತಾರೆ. ಕೇವಲ ಮಹಿಳಾ ವ್ಯಾಪಾರಿಗಳನ್ನು ಹೊಂದಿರುವ ವಿಶ್ವದ ಒಂದೇ ಒಂದು ಮಾರುಕಟ್ಟೆ ಇದಾಗಿದೆ.
ಅಮ್ಮನ ಮಾರುಕಟ್ಟೆ ಎಂಬುದು ಇಮಾ ಮಾರುಕಟ್ಟೆಯ ಅರ್ಥ. ಈ ಮಾರುಕಟ್ಟೆಯಲ್ಲಿ ಸಾವಿರಾರು ಮಹಿಳೆಯರು ಕೆಲಸ ಮಾಡ್ತಾರೆ. ಇಲ್ಲಿ ಆಹಾರ ಪದಾರ್ಥಗಳಿಂದ ಹಿಡಿದು ಎಲ್ಲ ವಸ್ತುಗಳು ಸಿಗುತ್ವೆ.
ಮೊದಲು ಟೆಂಟ್ ಕಟ್ಟಿಕೊಂಡು ವ್ಯಾಪಾರ ಮಾಡ್ತಾ ಇದ್ದರು. ಈಗ ಅಲ್ಲಿನ ಸರ್ಕಾರ ಕಟ್ಟಡವನ್ನು ಕಟ್ಟಿಸಿಕೊಟ್ಟಿದೆ.
1786 ರಲ್ಲಿಯೇ ಈ ಮಾರುಕಟ್ಟೆ ಆರಂಭವಾಗಿದೆ ಎಂಬ ಉಲ್ಲೇಖವಿದೆ. ಮಣಿಪುರದ ಪುರುಷರೆಲ್ಲ ಬರ್ಮಾ ಹಾಗೂ ಚೀನಾ ಜೊತೆ ಯುದ್ಧ ನಡೆಸುವುದರಲ್ಲಿ ನಿರತರಾಗಿರುತ್ತಿದ್ದರು. ಮನೆಯ ಜವಾಬ್ದಾರಿ ನೋಡಿಕೊಳ್ಳುವುದು ಮಹಿಳೆಯರ ಹೆಗಲಿಗೇರಿತ್ತು. ಆಗ ಮಹಿಳೆಯರಿಗಾಗಿ ಈ ಮಾರುಕಟ್ಟೆ ಜನ್ಮ ತಳೆಯಿತಂತೆ.