
ಇದು ಭಾರತವಲ್ಲ…..ಅಂದ ಹಾಗೆ ಭಾರತದ ನೋಟಿನಲ್ಲೂ ನಮ್ಮ ಯಾವ ದೇವತೆಗಳು ಇಲ್ಲ. ಆದರೆ, ಈ ದೇಶದಲ್ಲಿ ವಿಘ್ನವಿನಾಶಕ ಗಣೇಶನ ಫೋಟೋ ಇದೆ. ಅದು ಮುಸ್ಲಿಂ ಪ್ರಾಬಲ್ಯ ಇರುವ ದೇಶದಲ್ಲಿ ಎಂದರೆ ನೀವು ನಂಬಲೇಬೇಕು.
ಈ ಗಣೇಶನ ಚಿತ್ರವಿರುವ ನೋಟು ಇಂಡೋನೇಷ್ಯಾ ದೇಶದ್ದಾಗಿದೆ. 20,000 ರೂಪಾಯಿ ಮುಖಬೆಲೆಯ ಇಂಡೊನೇಷ್ಯಾದ ಹಳೆಯ ನೋಟಿನಲ್ಲಿ ಗಣೇಶನ ಫೋಟೋ ಇದೆ.
ಗಣೇಶ ಎಂದರೆ ಬುದ್ಧಿವಂತ, ಕಲೆ ಮತ್ತು ವಿಜ್ಞಾನದ ಸಂಕೇತ ಎಂದು ಇಲ್ಲಿ ನಂಬಲಾಗಿದೆ. ಈ ಕಾರಣಕ್ಕಾಗಿಯೇ ನೋಟಿನಲ್ಲಿ ಮುದ್ರಿಸಲಾಗಿದೆ ಎಂದು ಹೇಳಲಾಗುತ್ತದೆ.