ಮಂಗಳೂರು: ಆಳವಾದ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಜಿಂಕೆಯನ್ನು ರಕ್ಷಿಸಿರುವ ಘಟನೆ ಮಂಗಳೂರಿನ ಕಿನ್ಯದಲ್ಲಿ ನಡೆದಿದೆ. ಬಾವಿಯಲ್ಲಿ ಸಿಲುಕಿದ್ದ ಜಿಂಕೆಯನ್ನು ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ರಕ್ಷಿಸಿದ್ದಾರೆ.
ಬಾವಿಯಿಂದ ಹೊರತೆಗೆದು ರಕ್ಷಿಸಿದ ಜಿಂಕೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಪೊದೆಗಳಿಂದ ಆವೃತವಾಗಿದ್ದ ಆಳವಾದ ಬಾವಿಗೆ ಇಳಿದ ಅಗ್ನಿಶಾಮಕದಳದ ಸಿಬ್ಬಂದಿ, ಜಿಂಕೆಯ ದೇಹಕ್ಕೆ ಹಗ್ಗ ಸುತ್ತಿದ್ದಾರೆ. ಬಳಿಕ ಅದನ್ನು ಮೇಲಕ್ಕೆತ್ತಿದ್ದಾರೆ.
ಜಿಂಕೆಯ ಕಾಲು ಮತ್ತು ಬೆನ್ನೆಲುಬಿಗೆ ಗಾಯಗಳಾಗಿದ್ದು, ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಜಿಂಕೆಯು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.