ಯುವಜನತೆಯನ್ನು ಒಳಗೊಳ್ಳಲು ಭಾರತೀಯ ಸೇನೆ ‘ಅಗ್ನಿವೀರ’ ರ ನೇಮಕಾತಿಯನ್ನು ಆರಂಭಿಸಿದ್ದು, ಈ ಕುರಿತಂತೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ಅಗ್ನಿವೀರರ ನೇಮಕಾತಿಗೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಇ) ಈ ಬಾರಿ ಆನ್ ಲೈನ್ ನಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನು ಹೊರತುಪಡಿಸಿ ಪಠ್ಯ ಮತ್ತು ಪರೀಕ್ಷಾ ವಿಧಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಭಾರತೀಯ ಸೇನೆ ನೇಮಕಾತಿಯ ಪ್ರಧಾನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಎನ್ಎಸ್ ಸರ್ನಾ ತಿಳಿಸಿದ್ದಾರೆ.