ಯುವಕ-ಯುವತಿಯರಿಗೆ ಸೇನೆಯಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಅಗ್ನಿಪಥ ಯೋಜನೆಗೆ ಇಂದು ಸೇನೆಯ ಕರಡು ಅಧಿಸೂಚನೆ ಹೊರಬೀಳಲಿದ್ದು, ಒಟ್ಟು 4,0000 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಈ ನೇಮಕಾತಿಯಲ್ಲಿ ಪಾಲ್ಗೊಳ್ಳುವವರು ತಾವು ದೇಶದಲ್ಲಿ ಇತ್ತೀಚೆಗೆ ನಡೆದ ಯಾವುದೇ ಲೂಟಿ, ಹಿಂಸಾ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು. ಜೊತೆಗೆ ಅಗ್ನಿ ವೀರರಾಗಿ ಆಯ್ಕೆ ಮಾಡುವ ಮುನ್ನ ಎಲ್ಲ ಅಭ್ಯರ್ಥಿಗಳ ಕುರಿತು ಪೊಲೀಸರಿಂದ ಪರಿಶೀಲನೆ ನಡೆಸಲಾಗುತ್ತದೆ.
ಪಾರದರ್ಶಕವಾಗಿ ಈ ಆಯ್ಕೆ ನಡೆಯಲಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸೇರ್ಪಡೆಗೆ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ. ನಾಲ್ಕು ವರ್ಷ ಸೇವೆ ಸಲ್ಲಿಸುವ ಅವಧಿಯಲ್ಲಿ ಅವರುಗಳನ್ನು ‘ಅಗ್ನಿವೀರ’ ರೆಂದು ಕರೆಯಲಾಗುವುದು.
ಇವರುಗಳ ಸೇವಾವಧಿಯಲ್ಲಿ ಸಮವಸ್ತ್ರಕ್ಕೆ ವಿಶೇಷ ಚಿಹ್ನೆ ಅಳವಡಿಕೆ ಮಾಡಲಿದ್ದು, ನಾಲ್ಕು ವರ್ಷಗಳ ಸೇವೆ ಬಳಿಕ ಅರ್ಹತೆಗೆ ಅನುಗುಣವಾಗಿ ಯಾರನ್ನು ಉಳಿಸಿಕೊಳ್ಳಬೇಕು ಎಂಬ ಪೂರ್ಣ ಅಧಿಕಾರ ಸರ್ಕಾರದ್ದಾಗಿದೆ. ವರ್ಷಕ್ಕೆ 30 ದಿನ ರಜೆ ನೀಡಲಾಗುತ್ತಿದ್ದು, ಅಗತ್ಯವನ್ನು ಪರಿಗಣಿಸಿ ವೈದ್ಯಕೀಯ ರಜೆ ಸಹ ಸಿಗಲಿದೆ.