alex Certify ಅಗ್ಗದ ಬೆಲೆಗೆ ʼಆಸ್ತಿʼ ಖರೀದಿಸಲು ಇಲ್ಲಿದೆ ಸುವರ್ಣಾವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗ್ಗದ ಬೆಲೆಗೆ ʼಆಸ್ತಿʼ ಖರೀದಿಸಲು ಇಲ್ಲಿದೆ ಸುವರ್ಣಾವಕಾಶ

ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್‌.ಬಿ.ಐ. ಆಸ್ತಿಗಳನ್ನು ಹರಾಜಿಗೆ ಇಡಲಿದ್ದು, ಒಳ್ಳೆಯ ಬೆಲೆಯಲ್ಲಿ ಆಸ್ತಿ ಖರೀದಿ ಮಾಡಲು ಆಸಕ್ತರಿಗೆ ಅವಕಾಶ ಸೃಷ್ಟಿಯಾಗಿದೆ.

ವಿವಿಧ ರೀತಿಯ ಆಸ್ತಿಗಳನ್ನು ತಾನು ಹರಾಜಿಗೆ ಇಡುವುದಾಗಿ ಎಸ್‌.ಬಿ.ಐ. ಟ್ವೀಟ್ ಮಾಡಿದೆ. ಅಕ್ಟೋಬರ್‌ 25ರಂದು ಹರಾಜು ಇರಲಿದೆ. ಇದೇ ವಿಚಾರವನ್ನು ಜಾಹೀರಾತುಗಳ ಮೂಲಕ ಎಸ್‌.ಬಿ.ಐ. ತಿಳಿಸಿದೆ. ಎಲ್ಲ ರೀತಿಯ ಆಸ್ತಿಗಳು, ಭದ್ರತೆಗಳು ಹಾಗೂ ಮುಟ್ಟುಗೋಲು ಹಾಕಲಾದ ವಸ್ತುಗಳು ಇರಲಿವೆ.

IRCTC ಶೇರು ಖರೀದಿಸಿದ್ದವರಿಗೆ ಭರ್ಜರಿ ‌ʼಬಂಪರ್ʼ

ಎಸ್‌.ಬಿ.ಐ. ಜಾಲತಾಣದಲ್ಲಿ ತಿಳಿಸಿದಂತೆ ಎಸ್‌.ಬಿ.ಐ.ನ ಇ-ಹರಾಜಿನಲ್ಲಿ ಭಾಗಿಯಾಗಲು ಬೇಕಾದ ದಾಖಲೆಗಳು:

– ಇ-ಹರಾಜಿನ ನೊಟೀಸ್‌ನಲ್ಲಿ ನಮೂದಿಸಿರುವ ನಿರ್ದಿಷ್ಟ ಆಸ್ತಿಯ ಇಎಂಡಿ.

– ಕೆವೈಸಿ ದಾಖಲೆಗಳು – ಸಂಬಂಧಪಟ್ಟ ಶಾಖೆಯಲ್ಲಿ ಸಲ್ಲಿಸಬೇಕು.

– ಸಿಂಧುವಾದ ಡಿಜಿಟಲ್ ಸಹಿ – ಬಿಡ್ಡರ್‌ಗಳು ಇ-ಹರಾಜುದಾರರು ಅಥವಾ ಅನುಮೋದಿಸಲ್ಪಟ್ಟ ಏಜೆನ್ಸಿಯಿಂದ ಡಿಜಿಟಲ್ ಸಹಿ.

ಹಬ್ಬದ ಸಂದರ್ಭದಲ್ಲಿ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

– ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ – ಇಎಂಡಿ ಹಾಗೂ ಕೆವೈಸಿ ದಾಖಲೆಗಳನ್ನು ಸಂಬಂಧಪಟ್ಟ ಶಾಖೆಗೆ ಸಲ್ಲಿಸಿದ ಬಳಿಕ ನಿಮ್ಮ ಇ-ಮೇಲ್ ಐಡಿಗೆ ಕಳುಹಿಸಲಾಗುವುದು.

– ಹರಾಜಿನ ವೇಳೆ ನಿಯಮಗಳ ಅನುಸಾರ ಬಿಡ್ಡರ್‌ಗಳು ಲಾಗಿನ್ ಆಗಬೇಕು.

ಆಸ್ತಿಗಳ ಹರಾಜು ಸಂಪೂರ್ಣವಾಗಿ ಆನ್ಲೈನ್ ಇರಲಿದೆ. ನೀವೂ ಸಹ ಬಿಡ್‌ನಲ್ಲಿ ಭಾಗಿಯಾಗುವ ಇಚ್ಛೆಯಿದ್ದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ ಮೂಲಕ ಮೊದಲು ನೋಂದಣಿಯಾಗಬೇಕು.

ಸರ್ಕಾರಿ ನೌಕರರಿಗೆ ಕೇಂದ್ರದಿಂದ ಸ್ಪೆಷಲ್ ಗಿಫ್ಟ್: ಹಬ್ಬಕ್ಕೆ ಬೋನಸ್

ಖಾತ್ರಿ ಪ್ರಕ್ರಿಯೆ ಪೂರ್ಣವಾದಲ್ಲಿ ಆನ್ಲೈನ್ ಚಲನ್‌‌ ಭರ್ತಿಯಾಗಲಿದ್ದು, ಇದಾದ ನಂತರವಷ್ಟೇ ನೀವು ಆನ್ಲೈನ್‌ ಬಿಡ್‌ನಲ್ಲಿ ಭಾಗಿಯಾಗಬಹುದು.

ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಮಂದಿಯ ಆಸ್ತಿಗಳನ್ನು ಹರಾಜಿಗೆ ಇಡಲಾಗುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...