
ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿಯವರು ಈ ರಥಯಾತ್ರೆಯ ಪದ್ಧತಿಯನ್ನ ಶುರು ಮಾಡಿದ್ರು. 1990 ರ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲಾಯಿತು. ಬಿಜೆಪಿಯವರ ಪದ್ಧತಿಯ ಮೂಲಕ ಅವರನ್ನೆ ಸೋಲಿಸುವ ತಂತ್ರಕ್ಕೆ ಕೈ ಹಾಕಿರುವ ಅಖಿಲೇಶ್ ಚುನಾವಣಾ ಪ್ರಚಾರದ ಭಾಗವಾಗಿ ರಥಯಾತ್ರೆ ಮಾಡುತ್ತಿದ್ದಾರೆ.
ಉನ್ನಾವೊದಲ್ಲಿ ನಡೆದ ರಥಯಾತ್ರೆಯಲ್ಲಿ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಅವರಿಗಾಗಿ ತಂದಿದ್ದ ಉಡುಗೊರೆಗಳನ್ನು ಸ್ವೀಕರಿಸಿದರು. ಅದರಲ್ಲಿ ಎಲ್ಲರ ಗಮನ ಸೆಳೆದದ್ದು, ಭಗವಾನ್ ಹನುಮಾನ್ ಅವರ ಛಾಯಾಚಿತ್ರ. ಹನುಮಂತನ ಛಾಯಾಚಿತ್ರದ ಮೇಲೆ ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆ ಅಂದರೆ ಸೈಕಲ್ ಅನ್ನು ರೂಪಿಸಿ, ಅದರ ಜೊತೆಗೆ ಅದನ್ನ ಕೊಟ್ಟಿರುವ ಕಾರ್ಯಕರ್ತನ ಹೆಸರು ಸಹ ಇದೆ.
ಈ ಉಡುಗೊರೆಯನ್ನು ಪಡೆಯಲು, ರಥದ ಬಾಲ್ಕನಿಯಿಂದ ಮುಂದೆ ಸಾಗಿ, ಹನುಮಂತನ ಭಾವಚಿತ್ರವನ್ನು ಎರಡೂ ಕೈಗಳಿಂದ ಹಿಡಿದುಕೊಂಡರು. ಇನ್ನು ವಿಶೇಷವೆಂದರೆ ಇದೇ ಸಂದರ್ಭದಲ್ಲಿ ಅಖಿಲೇಶ್ ತಮ್ಮ ಎಡಗೈನಲ್ಲಿ ಹನುಮಂತನ ಗದೆ ಹಿಡಿದು ಕಾರ್ಯಕರ್ತರು ಹಾಗೂ ಅಲ್ಲಿ ನೆರೆದಿದ್ದ ಜನರಿಗೆ ವಂದಿಸಿದರು. ಈ ಘಟನೆ ನಂತರ, ಅಖಿಲೇಶ್ ಅವರು ಹಿಂದೂಗಳ ಭರವಸೆ ಮರಳಿ ಪಡೆಯಲು ಈ ರೀತಿ ಪ್ರಚಾರ ಮಾಡ್ತಿದ್ದಾರೆ ಎಂಬ ಚರ್ಚೆಗಳು ಹೆಚ್ಚಾಗಿವೆ.