ಏ, 23 ರಂದು ಅಕ್ಷಯ ತೃತೀಯವನ್ನು ಆಚರಿಸಲಾಗ್ತಿದೆ. ಅಕ್ಷಯ ತೃತೀಯಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಇದನ್ನು ಶುಭ ದಿನವೆಂದು ಪರಿಗಣಿಸಲಾಗ್ತಿದೆ. ಯಾವುದೇ ಶುಭ ಕೆಲಸ ಮಾಡಲು ಪಂಚಾಂಗ ನೋಡುವ ಅಗತ್ಯವಿಲ್ಲ. ಈ ದಿನ ಲಕ್ಷ್ಮಿ ದೇವಿಯ ಆರಾಧನೆಯನ್ನೂ ಮಾಡಲಾಗುತ್ತದೆ.
ಶುಭ ದಿನವಾದ ಅಕ್ಷಯ ತೃತೀಯದಂದು ಕೆಲವೊಂದು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಇದು ಲಕ್ಷ್ಮಿ ದೇವಿ ಕೋಪಕ್ಕೆ ಕಾರಣವಾಗುತ್ತದೆ. ಸಂಪತ್ತಿನ ನಷ್ಟವಾಗುತ್ತದೆ.
ಕೊಳಕಿರುವ ಮನೆಯಲ್ಲಿ ಎಂದೂ ಲಕ್ಷ್ಮಿ ನೆಲೆಸುವುದಿಲ್ಲ. ಸ್ವಚ್ಛವಿರುವ ಸ್ಥಳದಲ್ಲಿ ಲಕ್ಷ್ಮಿ ಸದಾ ನೆಲೆಸುತ್ತಾಳೆ. ಅಕ್ಷಯ ತೃತೀಯದಂದು ಮನೆಯನ್ನು ಸ್ವಚ್ಛಗೊಳಿಸಬೇಕು. ಪೂಜೆ ಸ್ಥಳ ಕೊಳಕಾಗಿದ್ದರೆ ಅಕ್ಷಯ ತೃತೀಯದಂದು ಯಾವುದೇ ಪೂಜೆ ಮಾಡಿದ್ರೂ ಪ್ರಯೋಜನವಿಲ್ಲ.
ಅಕ್ಷಯ ತೃತೀಯದಂದು ಕೆಟ್ಟ ಶಬ್ಧಗಳ ಬಳಕೆ ಮಾಡಬಾರದು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಬೇಕು. ಅಕ್ಷಯ ತೃತೀಯದಂದು ಜಗಳ ಮಾಡಿದ್ರೆ ಲಕ್ಷ್ಮಿ ಕೋಪಗೊಳ್ಳುತ್ತಾಳೆ.
ತುಳಸಿ, ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ. ತುಳಸಿಯನ್ನು ಅಕ್ಷಯ ತೃತೀಯದಂದು ಪೂಜಿಸಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಸ್ನಾನ ಮಾಡದೆ ತುಳಸಿ ಸಸ್ಯವನ್ನು ಮುಟ್ಟ ಬಾರದು. ಅದರ ಎಲೆಯನ್ನು ಕೀಳಬಾರದು.
ಅಕ್ಷಯ ತೃತೀಯ ದಿನವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಹೊಸ ಮನೆಯನ್ನು ಖರೀದಿಸಬಹುದು. ಹೊಸ ವಸ್ತುಗಳನ್ನು ಖರೀದಿಸಬಹುದು.
ಅಕ್ಷಯ ತೃತೀಯ ದಿನದಂದು ಮಾಂಸ, ಮದ್ಯ, ಬೆಳ್ಳುಳ್ಳಿ, ಈರುಳ್ಳಿ ಮುಂತಾದ ಆಹಾರವನ್ನು ತಿನ್ನಬಾರದು. ಇದು ಲಕ್ಷ್ಮಿಯ ಕೋಪಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಸಂಪತ್ತು, ಸಮೃದ್ಧಿ ನಷ್ಟವಾಗುತ್ತದೆ.