ಅಕ್ಷಯ ತೃತೀಯ ದೇವಿ ಲಕ್ಷ್ಮಿಗೆ ಪ್ರಿಯವಾದ ದಿನ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಶುಭ ದಿನ ಮನೆಯ ಕೆಲವೊಂದು ಸ್ಥಳಗಳಲ್ಲಿ ವಿಶೇಷ ವಸ್ತುಗಳನ್ನಿಟ್ಟರೆ ದೇವಿ ಲಕ್ಷ್ಮಿಯ ಆಗಮನವಾಗುತ್ತದೆ. ಜೊತೆಗೆ ಅನೇಕ ಸಮಸ್ಯೆಗಳು ದೂರವಾಗುತ್ತವೆ.
ಅಕ್ಷಯ ತೃತೀಯ ಪೂಜೆ ಮಾಡಿದ ನಂತ್ರ ದೇವರ ಮನೆಯಲ್ಲಿ ಬೆಳ್ಳಿ ಗಣೇಶ ಹಾಗೂ ಲಕ್ಷ್ಮಿಯ ಮೂರ್ತಿಯನ್ನಿಡುವುದರಿಂದ ಸುಖ-ಸಮೃದ್ಧಿ ನೆಲೆಸುತ್ತದೆ. ಬೆಳ್ಳಿಯಿಂದ ಮಾಡಿರುವ ಗಣೇಶ ಹಾಗೂ ಲಕ್ಷ್ಮಿ ಶುಭ ಸೂಚಕ. ಈ ಮೂರ್ತಿ ಬಳಿ ಬೆಳ್ಳಿ, ಬಂಗಾರ, ವಜ್ರದ ಯಾವುದೇ ವಸ್ತುಗಳನ್ನಿಡಿ. ಜೊತೆಗೆ ಪಾಸ್ ಬುಕ್, ಬ್ಯಾಂಕ್ ಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳನ್ನಿಡಿ.
ಹಣ ಇಡುವ ಅಥವಾ ಕಪಾಟಿನಲ್ಲಿ ಕಪ್ಪು ಅರಿಶಿಣವನ್ನಿಡಿ. ಹೀಗೆ ಮಾಡುವುದರಿಂದ ಸಂಪತ್ತಿನ ಮೇಲೆ ಯಾವ ದೃಷ್ಟಿಯೂ ಬೀಳುವುದಿಲ್ಲ. ಜೊತೆಗೆ ಸಂಪತ್ತು ವೃದ್ಧಿಯಾಗಲಿದೆ.
ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ವಿಮೆ ಸೇರಿದಂತೆ ಯಾವ ದಾಖಲೆಗಳಿವೆಯೂ ಅವೆಲ್ಲವನ್ನು ಲಕ್ಷ್ಮಿ ಅಥವಾ ಶ್ರೀ ಯಂತ್ರದ ಬಳಿ ಇರಿಸಿ.
ಯಂತ್ರ ಶಾಸ್ತ್ರದಲ್ಲಿ ಶ್ರೀ ಯಂತ್ರಕ್ಕೆ ಮಹತ್ವದ ಸ್ಥಾನವಿದೆ. ಯಾರ ಮನೆಯಲ್ಲಿ ಶ್ರೀ ಯಂತ್ರವಿದೆಯೋ ಅಲ್ಲಿ ದೇವರು ಸದಾ ನೆಲೆಸಿರುತ್ತಾನೆಂಬ ನಂಬಿಕೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅಕ್ಷಯ ತೃತೀಯದಂದು ಶ್ರೀ ಯಂತ್ರವನ್ನು ಮನೆಗೆ ತನ್ನಿ.
ಕೆಂಪು ಬಟ್ಟೆಯಲ್ಲಿ ತೆಂಗಿನ ಕಾಯಿಯನ್ನು ಕಟ್ಟಿ ಹಣವಿಡುವ ಸ್ಥಳದಲ್ಲಿಡಿ.
ಲಕ್ಷ್ಮಿ ಕೃಪೆ ಗಳಿಸಲು ಕಮಲದ ಬೀಜದಿಂದ ಮಾಡಿದ ಹಾರವನ್ನು ದೇವರ ಮನೆಯಲ್ಲಿಡಿ.
ಕುಬೇರನ ಪ್ರತಿಮೆಯನ್ನು ದೇವರ ಕೋಣೆಯ ಉತ್ತರ ದಿಕ್ಕಿನಲ್ಲಿಡಿ. ಮುಟ್ಟಿನ ದಿನಗಳಲ್ಲಿ ಕುಬೇರನ ಪ್ರತಿಮೆಯನ್ನು ಮಹಿಳೆಯರು ಮುಟ್ಟಬಾರದು.
ಲಕ್ಷ್ಮಿ ಸಮುದ್ರದಲ್ಲಿ ಸಿಗುವ ಚಿಪ್ಪುಗಳನ್ನು ಇಷ್ಟಪಡ್ತಾಳೆ. ಹಾಗಾಗಿ ಅಕ್ಷಯ ತೃತೀಯದಂದು ಚಿಪ್ಪನ್ನು ಕಪಾಟಿನಲ್ಲಿಡಿ.