alex Certify ಅಕ್ಷಯ ತೃತೀಯದಂದು ರಾಶಿಗನುಗುಣವಾಗಿ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಷಯ ತೃತೀಯದಂದು ರಾಶಿಗನುಗುಣವಾಗಿ ಮಾಡಿ ಈ ಕೆಲಸ

ಈ ಬಾರಿ ಮೇ.3ರಂದು ಅಕ್ಷಯ ತೃತೀಯ ಆಚರಣೆ ಮಾಡಲಾಗುತ್ತಿದೆ. ಅಕ್ಷಯ ತೃತೀಯದಂದು ದಾನಕ್ಕೆ ಹೆಚ್ಚಿನ ಮಹತ್ವವಿದೆ. ರಾಶಿಗನುಗುಣವಾಗಿ ಅಕ್ಷಯ ತೃತೀಯದಂದು ದಾನ ಮಾಡಬೇಕು.

ಮೇಷ: ಈ ರಾಶಿಯವರು ಕೆಂಪು ಬಟ್ಟೆಯಲ್ಲಿ ದ್ವಿದಳ ಧಾನ್ಯಗಳನ್ನು ಕಟ್ಟಿ ವ್ಯಾಪಾರ ಸ್ಥಳದಲ್ಲಿಡಬೇಕು. ನೌಕರಿ ಮಾಡುವವರು ಪೂಜಾ ಸ್ಥಳದಲ್ಲಿ ಇದನ್ನು ಇಡಬೇಕು. ಈ ರಾಶಿಯವರು ಧಾನ್ಯಗಳನ್ನು ದಾನ ಮಾಡಬೇಕು.

ವೃಷಭ: ಒಂದು ಕಳಶದಲ್ಲಿ ನೀರು ಹಾಕಿ ದಾನ ಮಾಡಬೇಕು. ಬಿಳಿ ಪಾತ್ರೆಯಲ್ಲಿ ಗಂಗಾ ಜಲವನ್ನು ಹಾಕಿ ಬಿಳಿ ಬಟ್ಟೆಯಲ್ಲಿ ಪಾತ್ರೆಯ ಮುಖವನ್ನು ಮುಚ್ಚಬೇಕು. ಇದನ್ನು ಪೂಜೆ ಸ್ಥಳದಲ್ಲಿಡುವುದ್ರಿಂದ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ.

ಮಿಥುನ: ಈ ರಾಶಿಯವರು ಹೆಸರು ಬೇಳೆಯನ್ನು ದಾನ ಮಾಡಬೇಕು. ಕಂಚಿನ ಪಾತ್ರೆಯನ್ನು ಹಸಿರು ಬಟ್ಟೆಯಲ್ಲಿ ಕಟ್ಟಿ ಪೂಜಾ ಸ್ಥಳದಲ್ಲಿಟ್ಟು ಪೂಜೆ ಮಾಡಬೇಕು.

ಕರ್ಕ: ಈ ರಾಶಿಯವರು ಬೆಳ್ಳಿಯನ್ನು ಧರಿಸಬೇಕು. ಬೆಳ್ಳಿಯ ಒಂದು ನಾಣ್ಯವನ್ನು ನೀರಿನಲ್ಲಿ ಹಾಕಿ ಪೂರ್ವ ದಿಕ್ಕಿನಲ್ಲಿಡಬೇಕು.

ಕನ್ಯಾ: ಈ ರಾಶಿಯವರು ಕರ್ಪೂರವನ್ನು ಹಚ್ಚಿ ಇಡೀ ಮನೆಗೆ ತೋರಿಸಬೇಕು. ಹಸಿರು ಬಳೆ, ಸೌಂದರ್ಯದ ವಸ್ತು ಹಾಗೂ ಹೆಸರು ಬೇಳೆಯನ್ನು ದಾನ ಮಾಡಬೇಕು.

ತುಲಾ: ಈ ರಾಶಿಯವರು ಅಕ್ಷಯ ತೃತೀಯದ ದಿನ ಬಿಳಿ ಬಟ್ಟೆಯನ್ನು ದಾನ ನೀಡಬೇಕು. ವಜ್ರವನ್ನು ಧರಿಸುವುದ್ರಿಂದ ಪ್ರಗತಿ, ಯಶಸ್ಸು ಲಭಿಸುತ್ತದೆ.

ವೃಶ್ಚಿಕ: ಬಾಟಲಿಯಲ್ಲಿ ಜೇನು ತುಪ್ಪವನ್ನು ಹಾಕಿ ಕೆಂಪು ಬಟ್ಟೆಯಲ್ಲಿ ಸುತ್ತಿ ಮನೆಯ ದಕ್ಷಿಣ ದಿಕ್ಕಿಗೆ ಇಡಬೇಕು. ಹವಳ ಧಾರಣೆ ಮಾಡುವುದ್ರಿಂದ ಆರೋಗ್ಯ, ಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ.

ಧನು: ಹಳದಿ ಬಟ್ಟೆಯಲ್ಲಿ ಅರಿಶಿನ ಹಾಕಿ ಪೂಜಾ ಸ್ಥಳದಲ್ಲಿಡಬೇಕು. ಧಾರ್ಮಿಕ ಪುಸ್ತಕವನ್ನು ಭಕ್ತಾಳುಗಳಿಗೆ ನೀಡಬೇಕು.

ಮಕರ: ಅಕ್ಷಯ ತೃತೀಯದಂದು ಯಾವುದಾದ್ರೂ ಪಾತ್ರೆಯಲ್ಲಿ ಎಳ್ಳಿನ ಎಣ್ಣೆಯನ್ನು ಹಾಕಿ ಕಪ್ಪು ಬಟ್ಟೆಯಲ್ಲಿ ಸುತ್ತಿಡಿ. ಇದನ್ನು ಮನೆಯ ಪೂರ್ವ ದಿಕ್ಕಿನಲ್ಲಿಡಿ.

ಕುಂಭ: ಧಾನ್ಯ, ಎಳನೀರು, ಕಬ್ಬಿಣದ ವಸ್ತುವನ್ನು ದಾನ ಮಾಡಬೇಕು. ಧನ, ಸಂಪತ್ತಿಗಾಗಿ ನೀಲಮಣಿ ಧರಿಸಬೇಕು.

ಮೀನ: ಹಳದಿ ಬಣ್ಣದ ಉಡುಪಿನಲ್ಲಿ ಹಳದಿ ಬಣ್ಣದ ಸಾಸಿವೆ ಮತ್ತು ಕೆಲ ನಾಣ್ಯಗಳನ್ನು ಪೂಜಾ ಸ್ಥಳ ಅಥವಾ ಮನೆಯ ಈಶಾನ್ಯ ದಿಕ್ಕಿಗಿಡಿ. ವೃದ್ಧರಿಗೆ ವಸ್ತುವನ್ನು ದಾನ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...