ಮುಂಬೈ: ರತ್ನಗಿರಿ ಜಿಲ್ಲೆಯ ಮುರುದ್‌ನಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ಐಷಾರಾಮಿ ಬಂಗಲೆಯನ್ನು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಖಾಸಗಿ ಕಾರ್ಯದರ್ಶಿ (ಪಿಎ) ತಾವಾಗಿಯೇ ಕೆಡವಿದ್ದಾರೆ.
ಇದಕ್ಕೆ ಕಾರಣ ಪ್ರತಿಪಕ್ಷ ಬಿಜೆಪಿ ನಾಯಕರು ಮಾಡಿದ್ದ ಅಕ್ರಮ ನಿರ್ಮಾಣದ ಆರೋಪ. ಕರಾವಳಿ ನಿಯಂತ್ರಣ ವಲಯದ ನಿಯಮಗಳನ್ನು ಗಾಳಿಗೆ ತೂರಿ, ಸಿಎಂ ಪಿಎ ಮಿಲಿಂದ್ ನರ್ವೇಕರ್ ಅವರು 2000 ಚದರ ಅಡಿಯ ಬಂಗಲೆ ನಿರ್ಮಿಸಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಇದರಿಂದ ಸಿಎಂಗೆ ಮುಜುಗರ ಉಂಟಾಗಬಾರದು ಎಂದು ಅಧಿಕಾರಿಗಳು ಪಿಎ ಮಿಲಿಂದ್ ಗೆ ಸಲಹೆ ನೀಡಿದ್ದರು.
ಈ ವರ್ಷ ಯಾವಾಗ ನಡೆಯಲಿದೆ ಬಾಲ ಗೋಪಾಲನ ಪೂಜೆ
ಅಧಿಕಾರಿಗಳು ಜೆಸಿಬಿ ಜತೆಗೆ ಬಂದು ಬಂಗಲೆ ಕೆಡವುದರ ಮೊದಲೇ ಎಚ್ಚೆತ್ತ ಮಿಲಿಂದ್ ತಾವೇ ಖಾಸಗಿಯಾಗಿ ಜೆಸಿಬಿ ತರಿಸಿಕೊಂಡು ಬಂಗಲೆ ನೆಲಸಮ ಮಾಡಿದ್ದಾರೆ. ಬಂಗಲೆ ಧ್ವಂಸದ ವಿಡಿಯೊ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಕಿರಿತ್ ಸೊಮೈಯಾ ಅವರು, ಮುಂದಿನ ಅಕ್ರಮ ನಿರ್ಮಾಣ ನೆಲಸಮ ಕಾಮಗಾರಿ ಶಿವಸೇನೆ ಸಚಿವ ಅನಿಲ್ ಪರಬ್ ಅವರದ್ದು ಎಂದು ಗುಡುಗಿದ್ದಾರೆ.