ಇಂಫಾಲದಿಂದ ಹೈದರಾಬಾದ್ ನಗರದ ಶಂಶಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಮಂಗಳವಾರ ಇಂಡಿಗೋ ಫ್ಲೈಟ್ 6E187 ನಲ್ಲಿ ಆಗಮಿಸಿದ ಎಂದು ತಿಳಿದು ಬಂದಿದೆ.
ಕಸ್ಟಮ್ಸ್ ಇಲಾಖೆಯು ಈತನ ವಿರುದ್ಧ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿದೆ. ಬಂಧಿತ ವ್ಯಕ್ತಿ ತನ್ನ ಗುದನಾಳದಲ್ಲಿ 975.16 ಗ್ರಾಂ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಿಸುತ್ತಿದ್ದನು ಎಂದು ಏರ್ಪೋರ್ಟ್ ಮೂಲಗಳಿಂದ ತಿಳಿದು ಬಂದಿದೆ. ಆತನಿಂದ 50.70 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ನಿಮ್ಮ ಸಮಸ್ಯೆಗಳ ನಿವಾರಣೆಗೆ ಮಾಡಿ ಗೋ ಪೂಜೆ
ಗುಪ್ತಚರ ಮಾಹಿತಿ ಆಧಾರದ ಮೇಲೆ, ಫೆಬ್ರವರಿ 22 ರಂದು ಇಂಫಾಲದಿಂದ ಇಂಡಿಗೋ ಫ್ಲೈಟ್ 6E187 ಮೂಲಕ ಆಗಮಿಸಿದ ಪುರುಷ ಪ್ರಯಾಣಿಕನ ವಿರುದ್ಧ, ಹೈದರಾಬಾದ್ ಕಸ್ಟಮ್ಸ್ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿದೆ. ಆತ 50.70 ಲಕ್ಷ ಮೌಲ್ಯದ 975.16 ಗ್ರಾಂ ಚಿನ್ನವನ್ನು ಪೇಸ್ಟ್ ರೂಪದಲ್ಲಿ ತನ್ನ ಗುದನಾಳದಲ್ಲಿಟ್ಟಕೊಂಡು ಕಳ್ಳಸಾಗಣೆ ಮಾಡುತ್ತಿದ್ದನೆಂದು ಹೈದರಾಬಾದ್ ಕಸ್ಟಮ್ಸ್ ಇಲಾಖೆ ಟ್ವೀಟ್ ನಲ್ಲಿ ತಿಳಿಸಿದೆ. ಆತನನ್ನು ಬಂಧಿಸಿರುವ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.