alex Certify ಅಕ್ರಮವಾಗಿ ʼರೇಶನ್‌ ಕಾರ್ಡ್‌ʼ ಪಡೆದಿದ್ದೀರಾ…? ಹಾಗಾದ್ರೆ ಓದಲೇಬೇಕು ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮವಾಗಿ ʼರೇಶನ್‌ ಕಾರ್ಡ್‌ʼ ಪಡೆದಿದ್ದೀರಾ…? ಹಾಗಾದ್ರೆ ಓದಲೇಬೇಕು ಈ ಸುದ್ದಿ

ದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಾನಾ ಯೋಜನೆಗಳನ್ನು ರೂಪಿಸುತ್ತಲೇ ಇವೆ. ಅದರಲ್ಲಿ ಪಡಿತರ ಚೀಟಿ ಯೋಜನೆಯೂ ಒಂದು. ಈ ಯೋಜನೆಯ ಮೂಲಕ ದೇಶದ ಬಡವರಿಗೆ ಪ್ರತಿ ತಿಂಗಳು ಅಕ್ಕಿ, ಬೇಳೆಕಾಳು, ಗೋಧಿ, ಉಪ್ಪು, ಸಾಂಬಾರ ಪದಾರ್ಥಗಳಂತಹ ಅನೇಕ ವಸ್ತುಗಳನ್ನು ನೀಡಲಾಗುತ್ತದೆ. ಆದರೆ, ಈ ಯೋಜನೆಯ ಲಾಭ ಪಡೆಯಲು ಸರ್ಕಾರ ಕೆಲವು ನಿಯಮಗಳನ್ನು ಮಾಡಿದೆ.

ಪಡಿತರ ಚೀಟಿ ಪಡೆಯಲು ಅರ್ಹರಲ್ಲದಿದ್ದರೂ, ನಿಯಮಗಳನ್ನು ಉಲ್ಲಂಘಿಸಿ ಕೆಲವರು ಉಚಿತ ಪಡಿತರ ಪಡೆಯುತ್ತಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಸರ್ಕಾರ ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಪಡಿತರ ಚೀಟಿಯನ್ನು ಅಕ್ರಮವಾಗಿ ಪಡೆದಿರುವವರು ಆದಷ್ಟು ಬೇಗ ಅದನ್ನು ಸರೆಂಡರ್ ಮಾಡುವಂತೆ ಸರ್ಕಾರ ಸೂಚಿಸಿದೆ. ಇಲ್ಲದಿದ್ದರೆ ದಂಡ ತೆರಬೇಕಾಗಿ ಬರಬಹುದು.

ಕೊರೊನಾ ಕಾರಣದಿಂದಾಗಿ 2020ರಿಂದಲೂ ಸರ್ಕಾರವು ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುತ್ತಿದೆ. ಅನರ್ಹರು ಇದನ್ನು ದುರುಪಯೋಗ ಮಾಡಿಕೊಂಡರೆ ಅರ್ಹರಿಗೆ ಯೋಜನೆಯ ಲಾಭ ಸಿಗುವುದಿಲ್ಲ. ಅವರನ್ನೆಲ್ಲ ಪತ್ತೆ ಮಾಡಿ ಆದಷ್ಟು ಬೇಗ ಕಾರ್ಡ್‌ಗಳನ್ನು ಒಪ್ಪಿಸುವಂತೆ ಸರ್ಕಾರ ಸೂಚಿಸಿದೆ. ಇಲ್ಲದೇ ಹೋದಲ್ಲಿ ಅಕ್ರಮವಾಗಿ ರೇಶನ್‌ ಕಾರ್ಡ್‌ ಪಡೆದವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಂಡು ಪಡಿತರ ಚೀಟಿಯನ್ನು ರದ್ದುಪಡಿಸಲಿದೆ.

ಅವರು ಪಡೆದಿರುವ ಉಚಿತ ಪಡಿತರವನ್ನೂ ವಸೂಲಿ ಮಾಡಲಾಗುವುದು. ಕಾರು, ಟ್ರ್ಯಾಕ್ಟರ್, ಎಸಿ, 100 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಮನೆ, 5 ಎಕರೆ ಜಮೀನು ಹೊಂದಿರುವವರು, ಆದಾಯ ತೆರಿಗೆ ಪಾವತಿಸುವವರು, ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಹೆಚ್ಚು ಇರುವವರು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರು, ನಗರ ಪ್ರದೇಶದಲ್ಲಿದ್ದು ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಹೆಚ್ಚಿದ್ದರೆ ಅಂಥವರು ಉಚಿತ ಪಡಿತರ ಚೀಟಿ ಪಡೆಯುವಂತಿಲ್ಲ.

ಸದ್ಯ ಉತ್ತರ ಪ್ರದೇಶ ಸರ್ಕಾರ ಅರ್ಹತೆ ಇಲ್ಲದಿದ್ದರೂ ಪಡಿತರ ಚೀಟಿ ಯೋಜನೆಯ ಮೂಲಕ ಉಚಿತ ಪಡಿತರ ಲಾಭ ಪಡೆಯುತ್ತಿರುವವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದೆ. ಎಲ್ಲಾ ರಾಜ್ಯಗಳಲ್ಲೂ ಇದೇ ನಿಯಮ ಜಾರಿಗೆ ಬರಬಹುದು. ಸರ್ಕಾರ ದಂಡಂ ದಶಗುಣಂ ಎನ್ನುವ ಮೊದಲು ಜನರೇ ಎಚ್ಚೆತ್ತುಕೊಳ್ಳುವುದು ಉತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...