
ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ‘ಮದಗಜ’ ಸಿನಿಮಾದ ಟೀಸರ್ ಅನ್ನು ಅಕ್ಟೋಬರ್ 14ರಂದು ಸಂಜೆ 5:05ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಕೆಲ ತಿಂಗಳ ಹಿಂದೆ ಈ ಸಿನಿಮಾ ಫಸ್ಟ್ ಲುಕ್ ಟೀಸರ್ ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಯಲ್ಲಿ ರಿಲೀಸ್ ಮಾಡಿದ್ದರು ಟಾಲಿವುಡ್ ಹಾಗೂ ಕಾಲಿವುಡ್ ಪ್ರೇಕ್ಷಕರಿಂದ ಈ ಟೀಸರ್ ಗೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು.
ದುರ್ಗಾ ಮಾತೆ ಪೆಂಡಾಲ್ ನಲ್ಲಿ ವಲಸಿಗರ ಸಮಸ್ಯೆ ವಿವರಿಸುವ ಥೀಮ್
ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು ಬಿಡುಗಡೆ ದಿನಾಂಕ ಘೋಷಣೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
