ಇಂಗ್ಲೆಂಡ್‌ನ ಹ್ಯಾಂಪ್‌ಶೈರ್‌ನಲ್ಲಿರುವ ಪಬ್ ನಲ್ಲಿ ಶೌಚಾಲಯದ ಕ್ಯುಬಿಕಲ್‌ಗಳ ನಡುವೆ ಇರುವ ಸಣ್ಣ ಬಾಗಿಲನ್ನು ಕಂಡು ಮಹಿಳೆಯೊಬ್ಬರು ಆಘಾತಕ್ಕೊಳಗಾಗಿರುವ ಘಟನೆ ನಡೆದಿದೆ.
ಮಹಿಳೆಯು ಸಣ್ಣ ಸ್ಲೈಡಿಂಗ್ ಬಾಗಿಲಿನ ವಿಡಿಯೋ ಮಾಡಿದ್ದು, ಅದರಲ್ಲಿ ಅವರು ರಂಧ್ರಕ್ಕೆ ಬೆರಳನ್ನು ಸೇರಿಸುವ ಮೂಲಕ ಮರದ ಬಾಗಿಲನ್ನು ತೆರೆದಿದ್ದಾರೆ. ನಂತರ ಅದನ್ನು ಬಲಕ್ಕೆ ಸ್ಲೈಡ್ ಮಾಡಿದ್ದಾರೆ. ಬಳಿಕ ಆಕೆ ಪಕ್ಕದ ಟಾಯ್ಲೆಟ್ ಕ್ಯುಬಿಕಲ್ ಅನ್ನು ತೋರಿಸಲು ರಂಧ್ರದ ಮೂಲಕ ಕ್ಯಾಮರಾವನ್ನಿಟ್ಟಿದ್ದಾಳೆ.
ಇದರ ವಿಡಿಯೋವನ್ನು ರೆಡ್ಡಿಟ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ. ಟಾಯ್ಲೆಟ್ ಕ್ಯುಬಿಕಲ್‌ಗಳ ನಡುವೆ ಸಣ್ಣ ಜಾರುವ ಬಾಗಿಲಿದೆ. ಅಂದರೆ ಇದರ ಅರ್ಥವೇನು ಎಂದು ಅವರು ಪ್ರಶ್ನಿಸಿದ್ದಾರೆ. ಹ್ಯಾಂಪ್‌ಶೈರ್ ಪಬ್‌ನ ಮಹಿಳೆಯರ ಶೌಚಾಲಯದಲ್ಲಿ ಈ ರೀತಿ ಇರುವುದು ತನಗೆ ಆಘಾತ ತರಿಸಿದೆ ಎಂದು ಅವರು ಹೇಳಿದ್ದಾರೆ. ಅಕ್ಕಪಕ್ಕದ ಟಾಯ್ಲೆಟ್ ಗೆ ಈ ರೀತಿಯ ಬಾಗಿಲನ್ನು ಯಾಕೆ ಇಡಲಾಗಿದೆ ಎಂಬುದು ಅವರ ಪ್ರಶ್ನೆಯಾಗಿದೆ.
ರೆಡ್ಡಿಟ್‌ನಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, ಬಹುಶಃ ಅದು ಬಾಗಿಲು ಆಗಿರಲಿಕ್ಕಿಲ್ಲ. ಬದಲಿಗೆ, ಇದು ಟಾಯ್ಲೆಟ್ ರೋಲ್ ಅನ್ನು ಸಂಗ್ರಹಿಸಲು ಉದ್ದೇಶಿಸಿರುವ ಶೆಲ್ಫ್ ಆಗಿರಬಹುದು. ಅಥವಾ ತುರ್ತು ಪರಿಸ್ಥಿತಿಯಲ್ಲಿ ಎರಡೂ ಕಡೆಯಿಂದ ಪ್ರವೇಶಿಸುವುದಕ್ಕಾಗಿ ಮಾಡಿರಬಹುದು ಎಂದು ಹೇಳಿದ್ದಾರೆ.
ಈ ರೀತಿಯ ಬಾಗಿಲು ಮಾಡಿರೋದ್ರಿಂದ ಟಾಯ್ಲೆಟ್ ಪೇಪರ್ ಅಥವಾ ಬೇರೆ ಉತ್ಪನ್ನಗಳನ್ನು ನಿಮ್ಮ ಪಕ್ಕದಲ್ಲಿರುವ ವ್ಯಕ್ತಿಗೆ ರವಾನಿಸಬಹುದು ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.