ಅಕ್ಕಿ ಹಿಟ್ಟು ಎಲ್ಲರ ಮನೆಯಲ್ಲಿ ಇದ್ದೆ ಇರುತ್ತದೆ. ಇದನ್ನು ಬಳಸಿ ಚರ್ಮದ ಕಾಂತಿಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಅಕ್ಕಿ ಹಿಟ್ಟು ಒಳ್ಳೆಯ ಸನ್ ಸ್ಕ್ರೀನ್ ರೀತಿ ವರ್ತಿಸುತ್ತದೆ. ಇದನ್ನು ದಿನಾ ಬಳಸುವುದರಿಂದ ಮುಖದ ಚರ್ಮ ಕೂಡ ನಳನಳಿಸುತ್ತದೆ.
ಇದನ್ನು ಬಳಸಿ ಹೇಗೆಲ್ಲಾ ಮುಖದ ಸೌಂದರ್ಯ ಕಾಪಾಡಿಕೊಳ್ಳಬಹುದು ಎಂಬುದನ್ನು ತಿಳಿಯೋಣ.
1 ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು ತೆಗೆದುಕೊಳ್ಳಿ. ಅದಕ್ಕೆ 1 ಚಮಚ ಲಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆದರೆ ಮುಖದಲ್ಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.
2 ಟೇಬಲ್ ಚಮಚ ಅಕ್ಕಿ ಹಿಟ್ಟಿಗೆ 1 ಚಮಚ ಹಾಲು, 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಣ್ಣು ಹಾಗೂ ತುಟಿಯ ಭಾಗ ಬಿಟ್ಟು ಎಲ್ಲಾ ಕಡೆ ಚೆನ್ನಾಗಿ ಹಚ್ಚಿ. ಕುತ್ತಿಗೆ ಬಳಿ ಕೂಡ ಹಚ್ಚಿ. 15 ನಿಮಿಷ ಬಿಟ್ಟು ಮುಖ ತೊಳೆಯಿರಿ.
ಇನ್ನು ಅಕ್ಕಿ ಹಿಟ್ಟಿಗೆ ಸ್ವಲ್ಪ ಮೊಸರು, ಸ್ವಲ್ಪ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕೂಡ ಕಾಂತಿಯುತವಾದ ಚರ್ಮ ನಿಮ್ಮದಾಗುತ್ತದೆ.