ತಿಂಗಳಿಗಾಗುವಷ್ಟು ದಿನಸಿ ಸಾಮಾನು ತಂದು ಮನೆಯಲ್ಲಿ ಇಟ್ಟುಕೊಳ್ಳುತ್ತವೆ. ಆದರೆ 15 ದಿನ ಕಳೆಯುವುದರೊಳಗೆ ಹುಳಗಳು ಬೇಳೆ ಡಬ್ಬದಲ್ಲಿ ಕಾಣಿಸಿಕೊಳ್ಳುತ್ತದೆ.
ಇದರಿಂದ ಅದನ್ನು ಉಪಯೋಗಿಸುವುದಕ್ಕೂ ಕಿರಿಕಿರಿಯಾಗುತ್ತದೆ. ಹಾಗಾಗಿ ಬೇಳೆ ಕಾಳುಗಳನ್ನು ಅಂಗಡಿಯಿಂದ ಮನೆಗೆ ತಂದ ಕೂಡಲೇ ಎಚ್ಚರ ವಹಿಸಿದರೆ ಹುಳಗಳ ಕಾಟದಿಂದ ಮುಕ್ತಿ ಪಡೆಯಬಹುದು.
*ಬೇಳೆಕಾಳುಗಳನ್ನು ಒಂದು ದಪ್ಪನೆಯ ಪ್ಲಾಸ್ಟಿಕ್ ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಉಪ್ಪು, ಅರಶಿನ, 2 ಮೆಣಸಿನಕಾಯಿ ಹಾಕಿ ಇಟ್ಟರೆ ಹುಳಗಳ ಕಾಟ ಇರುವುದಿಲ್ಲ.
*ಬೇಳೆಕಾಳುಗಳನ್ನು ಶೇಕರಣೆ ಮಾಡಿಡುವ ಮೊದಲು ಸಾಸಿವೆ ಎಣ್ಣೆಯನ್ನು ಅವುಗಳಿಗೆ ಹಚ್ಚಿ ಬಿಸಿಲಿನಲ್ಲಿ ಒಣಗಿಸಿ. ನಂತರ ಒಂದು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ ಇಡಿ. ಇದರಿಂದ ಹುಳಗಳು ಆಗದಂತೆ ಕಾಪಾಡಬಹುದು.
*ರವಾವನ್ನು ತಂದಾಗ ಅದನ್ನು ಜರಡಿ ಹಿಡಿದು ಬಿಸಿಯಾಗುವ ತನಕ ಹುರಿಯಿರಿ ನಂತರ ಇದನ್ನು ಸ್ಟೋರ್ ಮಾಡಿ ಇಟ್ಟರೆ ಕೆಡದಂತೆ ಕಾಪಾಡಬಹುದು.
ಬೇವಿನೆಲೆಯನ್ನು ನೆರಳಿನಲ್ಲಿ ಒಣಗಿಸಿ. ನಂತರ ಇದನ್ನು ಅಕ್ಕಿ ಡಬ್ಬದಲ್ಲಿ ಹಾಕಿ. ಇದರ ಮೇಲೆ ಅಕ್ಕಿ ಹಾಕಿ ಇಟ್ಟರೆ ಅಕ್ಕಿ ಹುಳ ಬರದಂತೆ ತಡೆಯಬಹುದು.
*ಸಕ್ಕರೆ ಡಬ್ಬಿಗೆ 3 ಲವಂಗವನ್ನು ಹಾಕಿ ಇಡಿ. ಇದರಿಂದ ಸಕ್ಕರೆ ಡಬ್ವಕ್ಕೆ ಇರುವೆ ಬರುವುದನ್ನು ತಡೆಗಟ್ಟಬಹುದು.
* ತಿಂಗಳಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಬೇಳೆಕಾಳುಗಳನ್ನು ತಂದು ಶೇಖರಣೆ ಮಾಡಿಟ್ಟುಕೊಳ್ಳಿ.
* ಬೇಳೆ ಕಾಳುಗಳನ್ನು ಇಡುವ ಶೆಲ್ಫ್ ಅನ್ನು ಆಗಾಗ ಕ್ಲೀನ್ ಮಾಡುತ್ತಾ ಇರಿ. ನೀರಿನ ಪಸೆ ಇರದಂತೆ ನೋಡಿಕೊಳ್ಳಿ.
* ಕಾಳುಗಳನ್ನು ಸ್ಟಿಲ್ ಡಬ್ಬ ಅಥವಾ ಗಾಜಿನ ಬಾಟಲಿಯಲ್ಲಿ ಶೇಖರಣೆ ಮಾಡಿಡಿ. ಇದರಿಂದ ಹುಳ ಬರದಂತೆ ತಡೆಯಬಹುದು.