ಬೇಕಾಗುವ ಸಾಮಾಗ್ರಿಗಳು: ಅಕ್ಕಿ- 2 ಕಪ್, ಬೆಲ್ಲ- 2 ಕಪ್, ಏಲಕ್ಕಿ-4, ಕಾಯಿತುರಿ- 1 ಕಪ್
ಮಾಡುವ ವಿಧಾನ: 2 ಕಪ್ ನಷ್ಟು ತೆಗೆದುಕೊಂಡ ಅಕ್ಕಿಯನ್ನು ಚೆನ್ನಾಗಿ ತೊಳೆಯಬೇಕು. ಬಳಿಕ ನೀರು ಬಸಿದು ಬಟ್ಟೆ ಮೇಲೆ ಆರಿಸಿಕೊಳ್ಳಬೇಕು. 5 ರಿಂದ 10 ನಿಮಿಷಗಳು ಸಾಕು. ಬಳಿಕ ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಡಬೇಕು. ಪಾತ್ರೆ ಬಿಸಿಯಾದ ಬಳಿಕ ಅಕ್ಕಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ಹುರಿಯಬೇಕು. ಅಕ್ಕಿ ಚೆನ್ನಾಗಿ ಅರಳಬೇಕು. ಸೌಟ್ ನಲ್ಲಿ ತಿರುವುತ್ತಿರಿ.
ಇಲ್ಲಿದೆ ನೋಡಿ ರುಚಿಕರವಾದ ʼಪನ್ನೀರ್ ಬಿರಿಯಾನಿʼ ಮಾಡುವ ವಿಧಾನ
ಅಕ್ಕಿಯೆಲ್ಲಾ ಚೆನ್ನಾಗಿ ಅರಳಿದ ಮೇಲೆ ತಟ್ಟೆಗೆ ಹಾಕಬೇಕು. ಹುರಿದ ಅಕ್ಕಿಯನ್ನು ಹುಡಿ ಮಾಡಬೇಕು. ಬಳಿಕ ಪಾತ್ರೆಯನ್ನು ಸ್ಟೌವ್ ನಲ್ಲಿಟ್ಟು, ಯಾವ ಗ್ಲಾಸ್ ನಲ್ಲಿ ಅಕ್ಕಿ ಅಳತೆ ತೆಗೆದುಕೊಂಡಿದ್ದೀರೋ ಅದರಲ್ಲೇ 2 ಕಪ್ ಬೆಲ್ಲ ಹಾಕಬೇಕು. ಬೆಲ್ಲ ಕರಗಲು ½ ಗ್ಲಾಸ್ ನೀರು ಹಾಕಬೇಕು. ಬೆಲ್ಲ ಕರಗಿದ ಮೇಲೆ 1 ಕಪ್ ನಷ್ಟು ಕಾಯಿ ತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಬಳಿಕ ಹುಡಿ ಮಾಡಿಟ್ಟ ಏಲಕ್ಕಿ ಹಾಕಬೇಕು. ನಂತರ ಮಾಡಿಟ್ಟ ಅಕ್ಕಿ ಹುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಸ್ವಲ್ಪ ತಣಿದ ಮೇಲೆ ಉಂಡೆ ಮಾಡಿಟ್ಟುಕೊಂಡರೆ ಅಕ್ಕಿ ತಂಬಿಟ್ಟು ಉಂಡೆ ರೆಡಿ.