alex Certify ಅಂಬುಲೆನ್ಸ್ ನಲ್ಲಿ ಮೃತಪಟ್ಟರೂ ವಿಮೆ ಪರಿಹಾರ: ಹೈಕೋರ್ಟ್ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಬುಲೆನ್ಸ್ ನಲ್ಲಿ ಮೃತಪಟ್ಟರೂ ವಿಮೆ ಪರಿಹಾರ: ಹೈಕೋರ್ಟ್ ಮಹತ್ವದ ಆದೇಶ

ಕಾಯಿಲೆಯಿಂದ ಬಳಲುತ್ತಿರುವ ರೋಗಿ ಚಿಕಿತ್ಸೆಗಾಗಿ ಆಂಬುಲೆನ್ಸ್ ನಲ್ಲಿ ಹೋಗುವ ವೇಳೆ ಅದು ಅಪಘಾತಕ್ಕೀಡಾಗಿ ಸಾವನ್ನಪ್ಪಿದರೆ ಅಂತಹ ಸಂದರ್ಭದಲ್ಲಿ ಮೃತ ವ್ಯಕ್ತಿಯ ಕುಟುಂಬಸ್ಥರು ಅಪಘಾತ ವಿಮೆ ಪಡೆಯಲು ಅರ್ಹರು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಪ್ರಕರಣದ ವಿವರ: ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಬ್ಬಿನಹಳ್ಳಿ ಗ್ರಾಮದ ವಾಸಿ ರವಿ ಎಂಬವರನ್ನು 2010ರ ಏಪ್ರಿಲ್ 13ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಆಂಬುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತಿತ್ತು.

ಈ ವೇಳೆ ವೇಗವಾಗಿ ಸಾಗುತ್ತಿದ್ದ ಅಂಬುಲೆನ್ಸ್ ಅಲಪೆ ಗ್ರಾಮದ ಕೊಡೇಕಲ್ ರೈಲ್ವೆ ಮೇಲ್ಸೆತುವೆ ಬಳಿ ಮಗಚಿಕೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ರವಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಹೀಗಾಗಿ ರವಿ ಕುಟುಂಬಸ್ಥರು ಅಪಘಾತ ವಿಮೆ ಪರಿಹಾರ ಕೋರಿದ್ದು, ನ್ಯಾಯಾಧಿಕರಣ 5.50 ಲಕ್ಷ ರೂಪಾಯಿಗಳ ಪರಿಹಾರಕ್ಕೆ ಆದೇಶಿಸಿತ್ತು. ಆದರೆ ರವಿ ಅಪಘಾತದಿಂದ ಮೃತಪಟ್ಟಿಲ್ಲ ಕಾಯಿಲೆಯಿಂದ ಸಾವು ಸಂಭವಿಸಿದೆ ಎಂದು ವಿಮಾ ಕಂಪನಿ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಧಿಕರಣದ ಆದೇಶವನ್ನು ಎತ್ತಿ ಹಿಡಿದ ನ್ಯಾಯಪೀಠ ಪರಿಹಾರ ಮೊತ್ತವನ್ನು 4.62 ಲಕ್ಷ ರೂಪಾಯಿಗಳಿಗೆ ಇಳಿಕೆ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...