ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ತಾವು ಚಲಿಸುತ್ತಿದ್ದ ಕಾರನ್ನು ಬದಿಗೆ ನಿಲ್ಲಿಸಿ, ಆಂಬ್ಯುಲೆನ್ಸ್‌ಗೆ ದಾರಿಮಾಡಿಕೊಟ್ಟಿದ್ದಾರೆ. ಸಿಎಂ ಅವರ ಮಾನವೀಯತೆ ಜನರಿಂದ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.
ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಟ್ರಾಫಿಕ್ ಡಿಸಿಪಿ ಸುಭಾಷ್ ಚಂದ್ರ ಶಾಕ್ಯ ಅವರು, ಗುರುವಾರ ಹಜರತ್‌ಗಂಜ್‌ನಿಂದ ಬಂದರಿಯಾಬಾಗ್‌ಗೆ ಮುಖ್ಯಮಂತ್ರಿಯವರ ವಾಹನ ತೆರಳುತ್ತಿದ್ದಾಗ ರಾಜಭವನದ ಬಳಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಬೆಂಗಾವಲು ವಾಹನಗಳೊಂದಿಗೆ ತಮ್ಮ ಕಾರನ್ನು ಸಹ ಬದಿಗೆ ಸರಿಸಿ ನಿಲ್ಲಿಸಿದ್ದಾರೆ. ತಮ್ಮ ವಾಹನದ ಚಲನೆಗೆ ಅನುಕೂಲವಾಗುವಂತೆ ಆಂಬ್ಯುಲೆನ್ಸ್ ಅನ್ನು ನಿಲ್ಲಿಸಿರುವುದನ್ನು ಮುಖ್ಯಮಂತ್ರಿ ಯೋಗಿ ನೋಡಿದ್ದಾರೆ.
ಕೂಡಲೇ ಭದ್ರತಾ ಸಿಬ್ಬಂದಿ ಬಳಿ ವಾಹನವನ್ನು ರಸ್ತೆಬದಿಯಲ್ಲಿ ನಿಲ್ಲಿಸಿ, ಆಂಬ್ಯುಲೆನ್ಸ್ ಹೋಗಲು ಅವಕಾಶ ಮಾಡಿಕೊಡುವಂತೆ ಹೇಳಿದ್ದಾರೆ ಎಂದು ಡಿಸಿಪಿ ಟ್ರಾಫಿಕ್ ಸುಭಾಷ್ ಚಂದ್ರ ಶಾಕ್ಯ ತಿಳಿಸಿದ್ದಾರೆ.
ಸಿಎಂ ಅವರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಯೋಗಿ ಆದಿತ್ಯನಾಥ್ ಅವರ ಮಾನವೀಯ ಗುಣವನ್ನು ನೆಟ್ಟಿಗರು ಕೂಡ ಹಾಡಿ ಹೊಗಳಿದ್ದಾರೆ.