alex Certify ಅಂಬರೀಶ್ ಮೆಚ್ಚಿನ ಶ್ವಾನ ʼಬುಲ್‌ ಬುಲ್‌ʼ ನಿಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಬರೀಶ್ ಮೆಚ್ಚಿನ ಶ್ವಾನ ʼಬುಲ್‌ ಬುಲ್‌ʼ ನಿಧನ

ರೆಬೆಲ್‌ ಸ್ಟಾರ್ ಅಂಬರೀಶ್ ಸಾವಿನ ಬಳಿಕ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್ ಆಘಾತಕ್ಕೊಳಗಾಗಿದ್ದರು. ಇದೀಗ ಅವರಿಗೆ ಮತ್ತೊಂದು ನೋವಿನ ಸಂಗತಿ ಎದುರಾಗಿದೆ.

ಹೌದು, ಅಂಬರೀಶ್ ಪ್ರೀತಿಯಿಂದ ಸಾಕಿದ್ದ ಎರಡು ಶ್ವಾನಗಳು ಅಂದರೆ ಒಂದು ಕನ್ವರ್ ಮತ್ತೊಂದು ಬುಲ್ ಬುಲ್. ಈ ಶ್ವಾನಗಳು ಅಂದ್ರೆ ಅಂಬರೀಶ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಅಂಬರೀಶ್ ತೀರಿಕೊಂಡ ಬಳಿಕ ಕನ್ವರ್ ಊಟ ಬಿಟ್ಟು ಸಾವನ್ನಪ್ಪಿತ್ತು. ಇದೀಗ ಅವರ ಮತ್ತೊಂದು ಮುದ್ದಿನ ಶ್ವಾನ ಬುಲ್ ಬುಲ್ ಕೂಡ ಇಹಲೋಕ ತ್ಯಜಿಸಿದೆ.

ಅಂಬರೀಶ್ ನಿಧನರಾದ ಬಳಿಕ ಅಂದರೆ 2021 ಮೇ 24ರಂದು ಕನ್ವರ್ ಕೊನೆಯುಸಿರೆಳೆದಿತ್ತು. ಸುಮಾರು ಒಂಬತ್ತು ವರ್ಷಗಳಿಂದ ಅಂಬರೀಶ್ ಕುಟುಂಬದ ಜೊತೆ ಬುಲ್ ಬುಲ್ ಸದಸ್ಯನಾಗಿದ್ದ. ಈಗ ಸಾವನ್ನಪ್ಪಿರುವ ಬುಲ್-ಬುಲ್ ಶ್ವಾನವನ್ನು ಫಾರ್ಮ್ ಹೌಸ್ ನಲ್ಲೇ ಅಂತ್ಯ ಸಂಸ್ಕಾರ ಮಾಡಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...