
ಪಂದ್ಯ ನಡೆಯುತ್ತಿರುವ ವೇಳೆ ರವೀಂದ್ರ ಜಡೇಜಾ, ಅಂಪೈರ್ ಅನುಮತಿ ಪಡೆಯದೆ ತಮ್ಮ ಎಡಗೈ ತೋರು ಬೆರಳಿನ ನೋವಿನ ಶಮನಕ್ಕಾಗಿ ಮುಲಾಮು ಲೇಪಿಸಿದ್ದರು.
ಇದು ಚರ್ಚೆಗೆ ಗ್ರಾಸವಾಗಿದ್ದಲ್ಲದೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟೀಕೆಗಳು ಕೇಳಿ ಬಂದಿದ್ದವು. ಇದೀಗ ಮುಲಾಮು ಲೇಪಿಸಿಕೊಳ್ಳಲು ಅಂಪೈರ್ ಅನುಮತಿ ಪಡೆದಿರಲಿಲ್ಲ ಎಂಬ ಕಾರಣಕ್ಕೆ ಪಂದ್ಯ ಶುಲ್ಕದ ಶೇಕಡ 25ರಷ್ಟು ಮೊತ್ತದ ದಂಡವನ್ನು ವಿಧಿಸಲಾಗಿದೆ.