‘ಅಂಧೇರಿ ಈಸ್ಟ್’ ಕ್ಷೇತ್ರದಿಂದ ಅಭ್ಯರ್ಥಿ ಕಣಕ್ಕಿಳಿಸದಂತೆ ಬಿಜೆಪಿಗೆ ರಾಜ್ ಠಾಕ್ರೆ ಅಗ್ರಹ 17-10-2022 10:40AM IST / No Comments / Posted In: Latest News, India, Live News ಶಿವಸೇನೆ ಶಾಸಕ ರಮೇಶ್ ಲಾಟ್ಕೆ ಅಂಧೇರಿ ಈಸ್ಟ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ನಾಯಕ ರಾಜ್ ಠಾಕ್ರೆ ಆಗ್ರಹಿಸಿದ್ದಾರೆ. ನವೆಂಬರ್ 3ರಂದು ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಇಲ್ಲಿಂದ ದಿವಂಗತ ರಮೇಶ್ ಲಾಟ್ಕೆ ಅವರ ಪತ್ನಿ ಕಣಕ್ಕಿಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಾಕದೆ ಅವರನ್ನು ಬೆಂಬಲಿಸುವ ಮೂಲಕ ದಿವಂಗತ ಶಾಸಕರಿಗೆ ಗೌರವ ಸಲ್ಲಿಸಲಿ ಎಂದು ರಾಜ್ ಠಾಕ್ರೆ ಹೇಳಿದ್ದಾರೆ. ಈ ಕುರಿತಂತೆ ಭಾನುವಾರದಂದು ರಾಜ್ ಠಾಕ್ರೆ ಟ್ವೀಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪಕ್ಷದ ನಾಯಕರೊಂದಿಗೆ ಈ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. After the death of MLA Ramesh Latke, his widow has filed for candidature in the Andheri east by-poll. I request you to not fight any candidate against her. This will be an honourable tribute to the departed soul.@Dev_Fadnavis pic.twitter.com/OE8CDZkQsX — Raj Thackeray (@RajThackeray) October 16, 2022