ಬಹಳಷ್ಟು ಮಂದಿಗೆ ತಮ್ಮ ಕಾಲಿನ ಬಗ್ಗೆ ಅಷ್ಟಾಗಿ ಕಾಳಜಿ ಇರುವುದಿಲ್ಲ. ಮುಖಕ್ಕೆ ತೆಗೆದುಕೊಳ್ಳುವಷ್ಟು ಕೇರ್ ಕಾಲುಗಳ ಬಗ್ಗೆ ತೆಗೆದುಕೊಳ್ಳುವುದಿಲ್ಲ. ಆದರೆ ಅವುಗಳ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಅಂದವಾದ ಪಾದ ನಿಮ್ಮದಾಗುತ್ತದೆ.
* ಎರಡು ಮೂರು ಚಮಚ ಮುಲ್ತಾನಿ ಮಿಟ್ಟಿಗೆ ಅಗತ್ಯದಷ್ಟು ಗುಲಾಬಿ ನೀರನ್ನು ಬೆರೆಸಿ ಕಲಸಿಕೊಂಡು ಪಾದಕ್ಕೆ ಬಳಿದುಕೊಳ್ಳಬೇಕು. ಒಣಗಿದ ನಂತರ ತೊಳೆದು ಮಾಯಿಶ್ಚರೈಸರ್ ಕ್ರೀಮ್ ಹಚ್ಚಿಕೊಳ್ಳುವುದರಿಂದ ಪಾದ ಆರೋಗ್ಯವಾಗಿರುವುದರ ಜೊತೆಗೆ ಅಂದವಾಗಿ ಕಾಣುತ್ತದೆ.
* ಉಪ್ಪು ಮತ್ತು ನಿಂಬೆರಸ ಸೇರಿಸಿ ಪಾದಕ್ಕೆ ಹಚ್ಚಿಕೊಳ್ಳಬೇಕು. ಒಣಗಿದ ಮೇಲೆ ಅದನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಇದರಿಂದ ಮೃತ ಕಣಗಳು ಹೋಗಿ ಪಾದ ಫ್ರೆಶ್ ಆಗಿ ಕಾಣುತ್ತದೆ.
* ಹಿಮ್ಮಡಿ ಒಡೆದಿದ್ದರೆ ಅದಕ್ಕೆ ಕೊಬ್ಬರಿ ಎಣ್ಣೆ ಹಚ್ಚಿ ಮರ್ದನ ಮಾಡಿಕೊಂಡು ಕಾಲಿಗೆ ಸಾಕ್ಸ್ ಹಾಕಿಕೊಂಡು ಮಲಗಿದರೆ ಪಾದ ಮೃದುವಾಗುತ್ತದೆ.
* ಕಾಲಿನ ಉಗುರುಗಳಿಗೆ ಸದಾ ನೇಲ್ ಪಾಲಿಶ್ ಹಚ್ಚುವುದು ಒಳ್ಳೆಯದಲ್ಲ. ಅದು ಉಗುರಿನ ಆರೋಗ್ಯಕ್ಕೆ ತಡೆಯಾಗುತ್ತದೆ. ಹೀಗಾಗಿ ಉಗುರುಗಳು ವಾತಾವರಣದ ಗಾಳಿಯಲ್ಲಿ ಇದ್ದರೇನೇ ಆರೋಗ್ಯವಾಗಿರುತ್ತದೆ.
* ಪಾದಗಳಲ್ಲಿರುವ ಮೃತ ಕಣಗಳು ಹೋಗಬೇಕೆಂದರೆ ವಾರದಲ್ಲಿ ಒಂದು ಬಾರಿ ಸಾಬೂನು ಹಾಕಿ ಉಪ್ಪು ಹಾಕಿದ ನೀರಿನಲ್ಲಿ ಕಾಲುಗಳನ್ನು ಚೆನ್ನಾಗಿ ತೊಳೆಯಬೇಕು.