
ತುಟಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡುವುದನ್ನೇ ಮರೆತು ಬಿಡುತ್ತೇವೆ.
ತುಟಿಗಳ ಸಿಪ್ಪೆ ಏಳುವ ಸಮಸ್ಯೆ ಚಳಿಗಾಲದಲ್ಲಿ ಬಹುವಾಗಿ ಕಾಡುತ್ತದೆ.
ಮನೆಮದ್ದಿನ ಮೂಲಕವೇ ಈ ಸಮಸ್ಯೆಯನ್ನು ಬಗೆಹರಿಸಬಹುದು.
ಜೇನುತುಪ್ಪ ಮತ್ತು ಸಕ್ಕರೆಯ ಸ್ಕ್ರಬ್ ಮಾಡಿ ಹಚ್ಚುವುದರಿಂದ ತುಟಿಯ ಮೇಲ್ಪದರದ ಸಿಪ್ಪೆ ಏಳುವ ಸಮಸ್ಯೆ ಕಡಿಮೆಯಾಗುತ್ತದೆ. ಜೇನುತುಪ್ಪ ತುಟಿಯನ್ನು ನಯಗೊಳಿಸುತ್ತದೆ. ಈ ಮಿಶ್ರಣವನ್ನು ತುಟಿಗೆ ಹಚ್ಚಿ 5 ನಿಮಿಷ ಸ್ಕ್ರಬ್ ಮಾಡಿ. 10 ನಿಮಿಷದ ಬಳಿಕ ತೊಳೆಯಿರಿ. ವಾರಕ್ಕೆರಡು ಬಾರಿ ಇದನ್ನು ಪುನರಾವರ್ತಿಸಿ.
ತೆಂಗಿನ ಎಣ್ಣೆಗೆ ಟೀ ಟ್ರೀ ಎಣ್ಣೆಯನ್ನು ಬೆರೆಸಿ ಇದೇ ಪ್ರಯೋಗವನ್ನು ಮಾಡಬಹುದು. ಮಲಗುವ ಮುನ್ನ ಇದನ್ನು ಹಚ್ಚುವುದು ಒಳ್ಳೆಯದು. ಅಲೋವೇರಾ ಜೆಲ್ ಕೂಡಾ ಇದೇ ಫಲಿತಾಂಶವನ್ನು ನೀಡುತ್ತದೆ. ಶಿಯಾಬಟರ್, ರೋಸ್ ವಾಟರ್ ಮತ್ತು ಜೇನುತುಪ್ಪಗಳೂ ತುಟಿಗೆ ಹಿತಕರ ಅನುಭವ ನೀಡುತ್ತವೆ.