ಪಡಿತರ ಚೀಟಿ ಅಕ್ರಮ ತಡೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅನುಕೂಲವಾಗಿದ್ದವರೂ ಸಹ ಬಿಪಿಎಲ್ ಚೀಟಿ ಪಡೆದಿರುವ ಪ್ರಕರಣಗಳನ್ನು ಪತ್ತೆ ಹಚ್ಚಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಇದರ ಮಧ್ಯೆ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ಈ ತಿಂಗಳಿನಿಂದ ಪಡಿತರ ಪಡೆಯುವ ಎಲ್ಲ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿ ಹೊಂದಿರುವವರು ಎರಡು ಬಾರಿ ಆಧಾರ್ ಬಯೋಮೆಟ್ರಿಕ್ ನೀಡುವುದು ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯ ವಾಣಿ ಸಂಖ್ಯೆ 1967 ಅಥವಾ 14445 ಗೆ ಕರೆ ಮಾಡಬಹುದಾಗಿದೆ.