alex Certify ಅಂಡರ್ -19 ವಿಶ್ವಕಪ್; ಭಾರತೀಯ ಆಟಗಾರರ ಬೆನ್ನು ಬಿದ್ದ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಡರ್ -19 ವಿಶ್ವಕಪ್; ಭಾರತೀಯ ಆಟಗಾರರ ಬೆನ್ನು ಬಿದ್ದ ಕೊರೊನಾ

ಅಂಡರ್ -19 ವಿಶ್ವಕಪ್ ನಲ್ಲಿ ಭಾರತೀಯ ಕಿರಿಯರ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಇದರ ಬೆನ್ನಲ್ಲಿಯೇ ಕೊರೊನಾ ಹೆಮ್ಮಾರಿ ತಂಡದ ಆಟಗಾರರನ್ನು ಕಾಡುತ್ತಿದೆ.

ಭಾರತ ತಂಡವು ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದು, ಜ.29ರಂದು ಬಾಂಗ್ಲಾ ವಿರುದ್ಧ ಕಾದಾಟ ನಡೆಸಲಿದೆ. ಈಗ ತಂಡದ ಹಂಗಾಮಿ ನಾಯಕ ನಿಶಾಂತ್ ಸಿಂಧು ಅವರಿಗೆ ಸೋಂಕು ಆವರಿಸಿದೆ. ನಾಯಕ ಯಶ್ ಧುಲ್ ಅವರ ಅನುಪಸ್ಥಿತಿಯಲ್ಲಿ ಸಿಂಧು ನಾಯಕರಾಗಿದ್ದರು. ಸದ್ಯ ಅವರಲ್ಲಿಯೂ ಸೋಂಕು ಕಾಣಿಸಿಕೊಂಡಿದೆ.

ತಂಡದ ನಾಯಕ ಧುಲ್ ಅವರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದಾಗಿ ಅವರು ಹಿಂದೆ ಸರಿದಿದ್ದರು. ಹೀಗಾಗಿ ಸಿಂಧುಗೆ ನಾಯಕ ಪಟ್ಟ ನೀಡಲಾಗಿತ್ತು. ಸದ್ಯ ಅವರಲ್ಲಿಯೂ ಸೋಂಕು ಕಾಣಿಸಿಕೊಂಡಿದೆ. ಸಮಾಧಾನಕರ ಸಂಗತಿ ಎಂದರೆ, ಧುಲ್ ಕೊರೊನಾದಿಂದ ಗುಣಮುಖರಾಗಿದ್ದಾರೆ. ಆದರೆ, ಧುಲ್ ಬರುತ್ತಿದ್ದಂತೆ ಸಿಂಧು ಹೊರ ನಡೆಯುತ್ತಿರುವುದು ತಂಡದ ಹಿನ್ನೆಡೆಗೆ ಕಾರಣವಾಗುತ್ತಿದೆ.

ಸೋಂಕು ಹೆಚ್ಚಾಗಿ ಭಾರತೀಯ ಕಿರಿಯ ಆಟಗಾರರನ್ನೇ ಟಾರ್ಗೆಟ್ ಮಾಡಿದೆ. ಪಂದ್ಯಗಳು ಆರಂಭವಾದ ಬೆನ್ನಲ್ಲಿಯೇ ತಂಡದ ಐವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸಿಂಧು ಆಲ್ ರೌಂಡರ್ ಆಗಿದ್ದು, ತಂಡಕ್ಕೆ ಆಸರೆಯಾಗಿದ್ದರು. ಸದ್ಯ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡವು ಕ್ವಾರ್ಟರ್ ಫೈನಲ್ ನಲ್ಲಿ ಸೆಣಸಾಟ ನಡೆಸಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...