ಅಂಡರ್ -19 ವಿಶ್ವಕಪ್ ಜನವರಿ ಹಾಗೂ ಫೆಬ್ರವರಿಯಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ಏಷ್ಯಾಕಪ್ ಯುಎಇನಲ್ಲಿ ಡಿ. 23ರಿಂದ ಆರಂಭವಾಗಲಿದೆ. ಅದಕ್ಕಾಗಿ ಭಾರತೀಯ ಕಿರಿಯರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
ಈ ಏಷ್ಯಾಕಪ್ ನಲ್ಲಿ 8 ತಂಡಗಳು ಭಾಗವಹಿಸಲಿವೆ. 8 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ ಹಾಗೂ ಅಫ್ಘಾನಿಸ್ತಾನ ತಂಡಗಳಿವೆ. ಬಿ ಗುಂಪಿನಲ್ಲಿ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಕುವೈತ್ ತಂಡಗಳು ಭಾಗವಹಿಸಲಿವೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೆಮಿಫೈನಲ್ ಪ್ರವೇಶ ಮಾಡಲಿವೆ.
ಡಿ. 23ರಿಂದ ಭಾರತ ಕಿರಿಯರ ತಂಡದ ಹೋರಾಟ ಆರಂಭವಾಗಲಿದೆ. ಡಿ. 25ರಂದು ಭಾರತ ತಂಡವು ಪಾಕ್ ವಿರುದ್ಧ ಸೆಣಸಾಟ ನಡೆಸಲಿದೆ. ಫೈನಲ್ ಪಂದ್ಯ ಜನವರಿ 1ರಂದು ನಡೆಯಲಿದೆ.
ಅಂಡರ್-19 ಏಷ್ಯಾಕಪ್ ನ್ನು ಭಾರತೀಯ ತಂಡವೇ ಹೆಚ್ಚಾಗಿ ಗೆದ್ದಿದೆ. ಇಲ್ಲಿಯವರೆಗೂ 7 ಏಷ್ಯಾಕಪ್ ಗಳನ್ನು ಭಾರತ ತಂಡ ಗೆದ್ದಿದೆ. ಈ ಬಾರಿ ಭಾರತ ತಂಡವನ್ನು ಯಶ್ ಧುಲ್ ಮುನ್ನಡೆಸಲಿದ್ದಾರೆ. ಹರ್ನೂರ್ ಸಿಂಗ್ ಪನ್ನು, ಆಂಗ್ಕ್ರಿಶ್ ರಘುವಂಶಿ, ಅಂಶ್ ಗೋಸಾಯಿ, ಎಸ್‌ಕೆ ರಶೀದ್, ಯಶ್ ಧುಲ್ (ನಾಯಕ), ಅನೇಶ್ವರ್ ಗೌತಮ್, ಸಿದ್ಧಾರ್ಥ್ ಯಾದವ್, ಕೌಶಲ್ ತಾಂಬೆ, ನಿಶಾಂತ್ ಸಿಂಧು, ದಿನೇಶ್ ಬಾನಾ (ವಿಕೆಟ್ ಕೀಪರ್), ಆರಾಧ್ಯ ಯಾದವ್ (ವಿಕೆಟ್ ಕೀಪರ್), ರಾಜವರ್ಧನ್ ಬಾವಾಗೆ, ಗರ್ವ್ ಸಾಂಗ್ವಾನ್, ರವಿ ಕುಮಾರ್, ರಿಷಿತ್ ರೆಡ್ಡಿ, ಮಾನವ್ ಪರಾಖ್, ಅಮೃತ್ ರಾಜ್ ಉಪಾಧ್ಯಾಯ, ವಿಕ್ಕಿ ಓಸ್ತ್ವಾಲ್, ವಾಸು ವಾಟ್ಸ್ ಆಯ್ಕೆಯಾಗಿದ್ದಾರೆ.