ಅಂಜೂರದ ಸೇವನೆಯಿಂದ ಹಲವು ಬಗೆಯ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಇವು ಆರೋಗ್ಯದ ರಕ್ಷಣೆಗೆ ಬಹಳ ಒಳ್ಳೆಯದು.
ಅಂಜೂರದಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ಗೊತ್ತೇ?
ಅಂಜೂರವನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ವಯಸ್ಸನ್ನು ಮರೆಮಾಚಬಹುದು. ತ್ವಚೆಗೆ ಕಾಂತಿ ನೀಡುವ ಅಂಜೂರ ಮುಖದ ಕಲೆ ಮತ್ತು ನೆರಿಗೆಗಳನ್ನು ದೂರ ಮಾಡುತ್ತದೆ.
ಅಂಜೂರದ ರಸವನ್ನು ಮುಖಕ್ಕೆ ಹಚ್ಚಿಕೊಂಡರೆ ಮುಖ ಕಾಂತಿ ಪಡೆದುಕೊಳ್ಳುತ್ತದೆ. ಇದೊಂದು ನೈಸರ್ಗಿಕ ಫೇಸ್ ಪ್ಯಾಕ್ ಅಗಿದ್ದು ಇದನ್ನು ವಾರಕ್ಕೊಮ್ಮೆ ಮಾಡಿಕೊಳ್ಳಬಹುದು. ಅಂಜೂರವನ್ನು ನೆನೆಸಿಟ್ಟು ರುಬ್ಬಿ ಪೇಸ್ಟ್ ಮಾಡಿ, ಮೂರು ಹನಿ ಬಾದಾಮಿ ಎಣ್ಣೆ ಹಾಕಿ ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡರೆ ಮುಖದಲ್ಲಿರುವ ಮೊಡವೆ ಹಾಗೂ ಕಲೆಗಳು ಮಾಯವಾಗುತ್ತವೆ. ಅಂಜೂರ, ಮೊಸರು ಮತ್ತು ಜೇನುತುಪ್ಪದ ಮಿಶ್ರಣವೂ ಅತ್ಯಂತ ಪ್ರಯೋಜನಕಾರಿ.
ನೆನೆಸಿಟ್ಟ ಅಂಜೂರಕ್ಕೆ ಮೊಸರು ಮತ್ತು ಕಡಲೆ ಹಿಟ್ಟು ಸೇರಿಸಿ ರುಬ್ಬಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಹಾಗೇ ಕೂದಲು ಆರೋಗ್ಯವಾಗಿ, ನೀಳವಾಗಿ ಬೆಳೆಯುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳೂ ಇಲ್ಲ.